Publish Date: Sun, 26 Nov 2017 (08:26 IST)
Updated Date: Sun, 26 Nov 2017 (08:29 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ಪೋಷಕ ನಟ ರಂಘಾಯಣ ರಘು ರಾಜಕೀಯಕ್ಕೆ ಬರುತ್ತಾರಾ? ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಇದಕ್ಕೆ ಅವರೇ ಉತ್ತರ ನೀಡಿದ್ದಾರೆ.
ಖಾಸಗಿ ಮಾಧ್ಯಮವೊಂದಕ್ಕೆ ಮಾತನಾಡಿದ ರಂಗಾಯಣ ರಘು ರಾಜಕೀಯಕ್ಕೆ ಬರುವ ಇಂಗಿತವಿದೆ. ಚುನಾವಣೆಗೆ ನಿಲ್ಲುವುದಿದ್ದರೆ ಜೆಡಿಎಸ್ ನಿಂದಲೇ. ಕುಮಾರಣ್ಣ ಮನಸ್ಸು ಮಾಡಿದರೆ ಟಿಕೆಟ್ ಸಿಗುತ್ತೆ. ಮಧುಗಿರಿ ಕ್ಷೇತ್ರದಿಂದ ಟಿಕೆಟ್ ನೀಡಲು ಕೇಳಿದ್ದೇನೆ ಎಂದು ರಂಗಾಯಣ ರಘು ಹೇಳಿದ್ದಾರೆ.
ಹಿಂದಿನ ಚುನಾವಣೆಯಲ್ಲೇ ಟಿಕೆಟ್ ಕೇಳಿದ್ದೆ. ಆದರೆ ಮುಂದಿನ ಚುನಾವಣೆಯಲ್ಲಿ ಕೊಡುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಹಾಗಾಗಿ ಈ ಚುನಾವಣೆಗೆ ಕೊಟ್ಟರೆ ಜನ ಸೇವೆ ಮಾಡುತ್ತೇನೆ. ಕ್ಷೇತ್ರದ ಜನರ ಬೆಂಬಲ ನನಗಿದೆ ಎಂದು ರಘು ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ