Select Your Language

Notifications

webdunia
webdunia
webdunia
webdunia

ಮುತಾಲಿಕ್‌ ಫೋಟೋದೊಂದಿಗೆ ಅಶ್ಲೀಲ ಫೋಟೋ: ಜೆಡಿಎಸ್ ಮುಖಂಡನ ಬಂಧನ

ಮುತಾಲಿಕ್‌ ಫೋಟೋದೊಂದಿಗೆ ಅಶ್ಲೀಲ ಫೋಟೋ: ಜೆಡಿಎಸ್ ಮುಖಂಡನ ಬಂಧನ
ಬೆಳಗಾವಿ , ಶುಕ್ರವಾರ, 17 ನವೆಂಬರ್ 2017 (12:05 IST)
ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಫೋಟೋದೊಂದಿಗೆ ಅಶ್ಲೀಲ ಫೋಟೋ ಲಗತ್ತಿಸಿ ಪೋಸ್ಟ್ ಮಾಡಿದ್ದ ಜೆಡಿಎಸ್ ಮುಖಂಡನನ್ನು ಶ್ರೀರಾಮಸೇನೆ ಕಾರ್ಯಕರ್ತರು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಹುಕ್ಕೇರಿ ತಾಲೂಕಿನಲ್ಲಿ ವರದಿಯಾಗಿದೆ.
 
ಜೆಡಿಎಸ್ ಮುಖಂಡ ಬಸಗೌಡ ಪಾಟೀಲ್, ಮುತಾಲಿಕ್ ಫೋಟೋವನ್ನು ಅಶ್ಲೀಲ ಫೋಟೋದೊಂದಿಗೆ ಲಗತ್ತಿಸಿ ಪೋಸ್ಟ್ ಮಾಡಿದ್ದನು. ಇದನ್ನು ತಿಳಿದ ಶ್ರೀರಾಮಸೇನೆ ಕಾರ್ಯಕರ್ತರು ಆತನನ್ನು ಹಿಡಿದು ಥಳಿಸಿದ್ದಲ್ಲದೇ ಪೊಲೀಸರಿಗೆ ಒಪ್ಪಿಸಿ ದೂರು ದಾಖಲಿಸಿದ್ದಾರೆ.
 
ಆರೋಪಿ ಬಸಗೌಡ ಪಾಟೀಲ್‌ನ ಮುಖಕ್ಕೆ ಮಸಿ ಬಳೆದು ಪಟ್ಟಣದಲ್ಲಿ ಮೆರವಣಿದೆ ಮಾಡಿದ ಶ್ರೀರಾಮಸೇನೆ ಕಾರ್ಯಕರ್ತರು ಮುತಾಲಿಕ್ ವಿರುದ್ಧ ಇಂತಹ ಅಸಹ್ಯ ಕೃತ್ಯಗಳನ್ನು ಎಸಗಿದವರನ್ನು ಕ್ಷಮಿಸಲಾಗದು ಎಂದು ಗುಡುಗಿದ್ದಾರೆ.
 
ಪೊಲೀಸರು ಆರೋಪಿಯ ವಿರುದ್ಧ ದೂರು ದಾಖಲಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯಗೆ ತುರ್ತು ಕರೆ ಮಾಡಿದ ಎಚ್ ಡಿ ಕುಮಾರಸ್ವಾಮಿ