Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಸದನಕ್ಕೆ ತಲೆತೋರಿಸಿ ಕಲಾಪಕ್ಕೆ ನಾಪತ್ತೆಯಾದ ಕುಮಾರಸ್ವಾಮಿ

webdunia
ಶುಕ್ರವಾರ, 17 ನವೆಂಬರ್ 2017 (09:32 IST)
ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನ ಆರಂಭವಾಗಿ ನಾಲ್ಕು ದಿನ ಕಳೆದರೂ ಶಾಸಕರ ಗೈರು ಎದ್ದು ಕಾಣುತ್ತಿದೆ. ವಿಶೇಷವಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಒಮ್ಮೆ ಮಾತ್ರ ತಲೆ ತೋರಿಸಿದ್ದು ಬಿಟ್ಟರೆ, ಕಲಾಪಕ್ಕೆ ಹಾಜರಾಗಿಯೇ ಇಲ್ಲ.
 

ಉತ್ತರ ಕರ್ನಾಟಕದ ಭಾಗದ ಸಮಸ್ಯೆಗಳ ಚರ್ಚೆ, ಮೌಢ್ಯ ನಿಷೇಧ ವಿಧೇಯಕ, ಕಂಬಳಕ್ಕೆ ಕಾನೂನು ಮಾನ್ಯತೆ ಸೇರಿದಂತೆ ಪ್ರಮುಖ ವಿಷಯಗಳು ಚರ್ಚೆಯಾಗುತ್ತಿರಬೇಕಾದರೆ ಜೆಡಿಎಸ್ ಪಕ್ಷದ ನಾಯಕನೇ ಕಲಾಪದಲ್ಲಿ ಪಾಲ್ಗೊಂಡಿಲ್ಲ.

ಜೆಡಿಎಸ್ ಸಮಾವೇಶಗಳಿಂದಾಗಿ ಕುಮಾರಸ್ವಾಮಿ ಸದನ ಕಲಾಪಗಳಿಗೆ ಹಾಜರಾಗಲಿಲ್ಲ ಎಂದು ಜೆಡಿಎಸ್ ಸದಸ್ಯರು ನೆಪ ಹೇಳಿದರು. ಹಾಗಿದ್ದರೂ ಜೆಡಿಎಸ್ ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಕುಮಾರಸ್ವಾಮಿ ಈ ರೀತಿ ವಿಶೇಷ ಅಧಿವೇಶನಕ್ಕೆ ಬರದಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಸಂಸದ ಶಶಿ ತರೂರ್ ಗೆ ತೃತೀಯ ಲಿಂಗಿಯ ಪ್ರೇಮ ನಿವೇದನೆ!