Select Your Language

Notifications

webdunia
webdunia
webdunia
webdunia

ಸಚಿವ ಜಾರ್ಜ್‌ಗೆ ತನಿಖೆಗೆ ಮುನ್ನವೇ ಕ್ಲೀನ್ ಚಿಟ್: ಕುಮಾರಸ್ವಾಮಿ ಕಿಡಿ

ಸಚಿವ ಜಾರ್ಜ್‌ಗೆ ತನಿಖೆಗೆ ಮುನ್ನವೇ ಕ್ಲೀನ್ ಚಿಟ್: ಕುಮಾರಸ್ವಾಮಿ ಕಿಡಿ
ಬೆಂಗಳೂರು , ಬುಧವಾರ, 15 ನವೆಂಬರ್ 2017 (13:25 IST)
ಡಿವೈಎಸ್‌ಪಿ ಎಂ.ಕೆ.ಗಣಪತಿ ಪ್ರಕರಣದಲ್ಲಿ ನಗರಾಭಿವೃದ್ಧಿ ಖಾತೆ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಅವಸರದಲ್ಲಿ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಸರಕಾರದ ಒತ್ತಡದಿಂದಾಗಿ ಸಿಐಡಿ ಅಧಿಕಾರಿಗಳು ಸಚಿವ ಜಾರ್ಜ್‌ಗೆ ಕ್ಲೀನ್ ಚಿಟ್ ನೀಡಿದ್ದಾರೆ ಎನ್ನುವುದು ಸಿಬಿಐ ತನಿಖೆಯಲ್ಲಿ ಬಹಿರಂಗವಾಗಿದೆ. ಗಣಪತಿ ಆತ್ಮಹತ್ಯೆ ಮಾಡಿಕೊಂಡ ಕೋಣೆಯನ್ನು ಸಿಬಿಐ ಅಧಿಕಾರಿಗಳು ತನಿಖೆ ನಡೆಸಿದಾಗ ಬುಲೆಟ್ ಪತ್ತೆಯಾಗಿರುವುದು ಕಂಡುಬಂದಿದೆ ಎಂದರು.
 
ಹಿಂದೆ ಸಿಐಡಿ ಅಧಿಕಾರಿಗಳು ಯಾವ ರೀತಿ ಕೋಣೆಯನ್ನು ಮಹಜರು ಮಾಡಿದ್ದರು ಎನ್ನುವುದಕ್ಕೆ ಸಿಬಿಐ ತನಿಖೆಯಲ್ಲಿ ಸಿಕ್ಕ ಬುಲೆಟ್ ಸಾಕ್ಷಿಯಾಗಿದೆ. ಎಂತಹ ಅವಸರದಲ್ಲಿ ತನಿಖೆ ಮಾಡಿದ್ದರು ಎನ್ನುವುದು ಸಾಬೀತಾಗುತ್ತದೆ ಎಂದರು.
 
ಸರಕಾರ ಪ್ರಕರಣದಲ್ಲಿರುವ ಆರೋಪಿಗಳ ಸಾಕ್ಷ್ಯಗಳನ್ನು ಮುಚ್ಚಿಹಾಕಲು ಸಿಐಡಿ ಅಧಿಕಾರಿಗಳನ್ನು ಬಳಸಿಕೊಂಡಿತೆ ಎನ್ನುವ ಅನುಮಾನ ಎಲ್ಲರಲ್ಲಿ ಕಾಡುತ್ತಿದೆ. ಸರಕಾರಕ್ಕೆ ಇದರಿಂದ ನಾಚಿಕೆಯಾಗಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

17 ವರ್ಷದ ಯುವತಿಯ ಮೇಲೆ 10 ದಿನ ನಿರಂತರ ಗ್ಯಾಂಗ್‌ರೇಪ್