Select Your Language

Notifications

webdunia
webdunia
webdunia
webdunia

‘ರೆಸ್ಟ್ ಮಾಡಿ ಅಂದ್ರೂ ಕೇಳದೇ ದಲಿತರ ಗುಡಿಸಲುಗಳಿಗೆ ಭೇಟಿ ನೀಡ್ತಿದ್ದಾರೆ ಕುಮಾರಸ್ವಾಮಿ’

‘ರೆಸ್ಟ್ ಮಾಡಿ ಅಂದ್ರೂ ಕೇಳದೇ ದಲಿತರ ಗುಡಿಸಲುಗಳಿಗೆ ಭೇಟಿ ನೀಡ್ತಿದ್ದಾರೆ ಕುಮಾರಸ್ವಾಮಿ’
ಬೆಂಗಳೂರು , ಸೋಮವಾರ, 13 ನವೆಂಬರ್ 2017 (09:49 IST)
ಬೆಂಗಳೂರು:  ಕುಮಾರಸ್ವಾಮಿಗೆ ಎರಡೆರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಯಾಗಿದೆ. ದಿನಕ್ಕೆ 10 ಗಂಟೆ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ವೈದ್ಯರು ಸೂಚಿಸಿದ್ದಾರೆ. ಹಾಗಿದ್ದರೂ  ದಲಿತರ ಸಮಸ್ಯೆ ಆಲಿಸಲು ಅವರ ಗುಡಿಸಲುಗಳಿಗೆ ಭೇಟಿ ಕೊಡ್ತಿದ್ದಾರೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಪುತ್ರನ ಗುಣಗಾನ ಮಾಡಿದ್ದಾರೆ.

 
ಕೆಆರ್ ಪುರಂನ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ದೇವೇಗೌಡ, ಕುಮಾರಸ್ವಾಮಿ ವಿಶ್ರಾಂತಿ ಅಗತ್ಯವಿದ್ದರೂ, ರಾಜ್ಯಾದ್ಯಂತ ಪ್ರವಾಸ ಮಾಡಲು ಪ್ರಾರಂಭಿಸಿದ್ದಾರೆ. ದಲಿತರ ಕಷ್ಟಕ್ಕೆ ಸ್ಪಂದಿಸಲು ಹಂಬಲಿಸುತ್ತಿದ್ದಾರೆ ಎಂದು ದೇವೇಗೌಡ ಹೇಳಿದರು.

ಇದೇ ವೇಳೆ ಬೇರೆ ರಾಜ್ಯಗಳಲ್ಲಿರುವಂತೆ ಕನ್ನಡಿಗರಲ್ಲೂ ಪ್ರಾದೇಶಿಕ ಶಕ್ತಿ ಮೇಲೆ ಪ್ರೀತಿಯೇಕೆ ಇಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸಿ ರಾಷ್ಟ್ರೀಯ ಪಕ್ಷಗಳಿಗೆ ಬುದ್ಧಿ ಕಲಿಸಬೇಕು. ಇದಕ್ಕಾಗಿ ಕುಮಾರಸ್ವಾಮಿ ನಾಯಕತ್ವ ಬೆಂಬಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಈಶ್ವರಪ್ಪ ತಲೆ, ಬಾಯಿಗೆ ಲಿಂಕ್ ಇಲ್ಲ’