Select Your Language

Notifications

webdunia
webdunia
webdunia
Saturday, 19 April 2025
webdunia

'ಶೌಚಕ್ಕೆ ಕಷ್ಟವೆಂದು ಫಾರಿನ್ ಕಮೋಡ್ ತೆಗೆದುಕೊಂಡು ಹೋದರೆ ತಪ್ಪೇ?’

ಸಿಎಂ ಸಿದ್ದರಾಮಯ್ಯ
ಬೆಂಗಳೂರು , ಶುಕ್ರವಾರ, 10 ನವೆಂಬರ್ 2017 (09:05 IST)
ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ನಾಯಕರ ಮಾತುಗಳು ಎಲ್ಲೆ ಮೀರುವುದು ಸಹಜ. ಅದೇ ರೀತಿ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದಿರುವುದಕ್ಕೆ ವರಿಷ್ಠ ದೇವೇಗೌಡ ಸಿಟ್ಟಿಗೆದ್ದಿದ್ದಾರೆ.

 
‘ನಿಮ್ಮನ್ನು, ಯಡಿಯೂರಪ್ಪನವರನ್ನು ಗೌರವದಿಂದಲೇ ಕಂಡಿದ್ದೇವೆ. ನಾವೆಂದೂ ಲಘುವಾಗಿ ನಿಮ್ಮ ಬಗ್ಗೆ ಮಾತನಾಡಿಲ್ಲ. ಸುಮ್ಮನೇ ನಮ್ಮನ್ನು ಕೆಣಕಬೇಡಿ. ಮಾತುಗಳ ಮೇಲೆ ಹಿಡಿತವಿರಲಿ. ನಿಮ್ಮ ಮಾತುಗಳನ್ನು ಕೇಳಲು ಹೇಸಿಗೆಯಾಗುತ್ತದೆ. ನಿಮ್ಮ ಹಣದ ಧಿಮಾಕಿಗೆ ಜನರೇ ಬುದ್ಧಿ ಕಲಿಸುತ್ತಾರೆ’  ಹೀಗಂತ ದೇವೇಗೌಡರು ಸಿಎಂ ಸಿದ್ದುಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಗ್ರಾಮ ವಾಸ್ತವ್ಯ ವೇಳೆ ಕುಮಾರಸ್ವಾಮಿ, ಕಮೋಡ್, ಹಾಸಿಗೆ, ದಿಂಬು ಎತ್ತಿಕೊಂಡು ಹೋಗುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ವ್ಯಂಗ್ಯವಾಡಿದ್ದರು. ಕುಮಾರಸ್ವಾಮಿಗೆ ಹೃದಯದ ಶಸ್ತ್ರಚಿಕಿತ್ಸೆ ನಡೆದು ಕೇವಲ ಒಂದು ತಿಂಗಳಾಗಿದೆ. ಇಂತಹ ಸಂದರ್ಭದಲ್ಲಿ ಅವರ ಬಗ್ಗೆ ಮಾತನಾಡುವಾಗ ಕನಿಷ್ಠ ಸೌಜನ್ಯ ಬೇಡವೇ? ಹಳ್ಳಿಯಲ್ಲಿ ಇಂಡಿಯನ್ ಕಮೋಡ್ ಇರುತ್ತದೆಂದು ಫಾರಿನ್ ಕಮೋಡ್ ತೆಗೆದುಕೊಂಡು ಹೋದರೆ ಅದಕ್ಕೂ ವ್ಯಂಗ್ಯವಾಡಬೇಕಾ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಯಲಲಿತಾ ಪಕ್ಷಕ್ಕೆ ಕೈಕೊಟ್ಟು ಕರುಣಾನಿಧಿ ಜತೆ ಕೈ ಜೋಡಿಸಲಿದ್ದಾರಾ ಪ್ರಧಾನಿ ಮೋದಿ?