Publish Date: Tue, 07 Nov 2017 (17:01 IST)
Updated Date: Tue, 07 Nov 2017 (17:03 IST)
ಪ್ರಧಾನಿ ಮೋದಿಯ ಹಿಂದಿ ಭಾಷಣ ಕೇಳಿ ಮರುಳಾಗಬೇಡಿ. ನನಗೆ ಕೆಲಸ ಮಾಡಲು ಅವಕಾಶ ಕೊಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಕುಮಾರಪರ್ವ ಸಮಾವೇಶದಲ್ಲಿ ಪಕ್ಷದ ಅಭಿಮಾನಿಗಳನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೇಗೆ ಗೆದ್ದಿತು ಎನ್ನುವುದು ನನಗೆ ಗೊತ್ತಿದೆ. ಪೊಲೀಸ್ ಜೀಪಿನಲ್ಲಿಯೇ ಹಣ ಸಾಗಿಸಿ ಪಕ್ಷವನ್ನು ಗೆಲ್ಲಿಸಿದ್ದಾರೆ ಎಂದು ಆರೋಪಿಸಿದರು.
ಸಿಎಂ ಸಿದ್ದರಾಮಯ್ಯ ಬಳಿ ಹಣಕ್ಕೇನು ಕೊರತೆಯಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಯಗಳಿಸಲು ನೂರಾರು ಕೋಟಿ ರೂಪಾಯಿ ಬೇಕಾದ್ರೂ ಖರ್ಚು ಮಾಡ್ತಾರೆ. ಅವರಿಗೆ ಯಾವಾ ಮಾರ್ಗವಾದರೂ ಸರಿ ಗೆಲ್ಲಬೇಕು ಎನ್ನುವುದೇ ಮುಖ್ಯಗುರಿಯಾಗಿದೆ ಎಂದರು.
ದೇವೇಗೌಡರ ಜೊತೆ ಇದ್ದ ಸಿದ್ದರಾಮಯ್ಯ ಬೇರೆ, ಇವಾಗ ಇರುವ ಸಿಎಂ ಸಿದ್ದರಾಮಯ್ಯ ಬೇರೆ. ಸಿಎಂ ಸಿದ್ದರಾಮಯ್ಯರನ್ನು ಯಾರೂ ನಂಬಬೇಡಿ ಎಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.