Publish Date: Mon, 13 Nov 2017 (09:36 IST)
Updated Date: Mon, 13 Nov 2017 (09:38 IST)
ಬೆಂಗಳೂರು: ಚುನಾವಣೆ ಹತ್ತಿರಬರುತ್ತಿದ್ದಂತೆ ರಾಜಕೀಯ ನಾಯಕರ ಬಾಯಿಯಿಂದ ಎಲ್ಲೆ ಮೀರಿದ ಮಾತುಗಳು ಬರುವುದು ಸಹಜ. ಇದೀಗ ಈಶ್ವರಪ್ಪ ವಿರುದ್ಧ ಅಂತಹದ್ದೇ ಹೇಳಿಕೆಯನ್ನು ಸಚಿವ ಎಂಬಿ ಪಾಟೀಲ್ ನೀಡಿದ್ದಾರೆ.
‘ಈಶ್ವರಪ್ಪ ಹುಟ್ಟುತ್ತಲೇ ತಲೆ, ಬಾಯಿಗೆ ಲಿಂಕ್ ಇಲ್ಲದೇ ಹುಟ್ಟಿದ್ದಾರೆ. ಹಾಗಾಗಿ ಅವರಿಗೆ ಏನು ಮಾತನಾಡುತ್ತಿದ್ದೇನೆಂದೇ ಗೊತ್ತಿಲ್ಲ’ ಎಂದು ಎಂಬಿ ಪಾಟೀಲ್ ಟೀಕಿಸಿದ್ದಾರೆ.
ನಿನ್ನೆಯಷ್ಟೇ ಈಶ್ವರಪ್ಪ, ಸಿಎಂ ಸಿದ್ದರಾಮಯ್ಯ ಮೈಯಲ್ಲಿ ಟಿಪ್ಪು ರಕ್ತ ಹರಿತಿದೆ ಎಂದಿದ್ದರು. ಇದಕ್ಕೆ ಪ್ರತಿಯಾಗಿ ಸಿಎಂ, ಈಶ್ವರಪ್ಪ ಮೈಯಲ್ಲಿ ಪಿಶಾಚಿ ರಕ್ತ ಹರೀತಿದೆ ಎಂದಿದ್ದರು. ಈ ಹಿನ್ನಲೆಯಲ್ಲಿ ಈಶ್ವರಪ್ಪ ವಾಗ್ದಾಳಿ ನಡೆಸಿರುವ ಎಂಬಿ ಪಾಟೀಲ್ ಮೊದಲು ಈಶ್ವರಪ್ಪ ಚಿಕಿತ್ಸೆ ಪಡೆಯುವುದು ಒಳ್ಳೆಯದು ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ