Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ವಿರುದ್ಧವೇ ವಾಗ್ದಾಳಿ ನಡೆಸಿದ ಡಿ.ವಿ.ಸದಾನಂದಗೌಡ

ಪ್ರಧಾನಿ ಮೋದಿ ವಿರುದ್ಧವೇ ವಾಗ್ದಾಳಿ ನಡೆಸಿದ ಡಿ.ವಿ.ಸದಾನಂದಗೌಡ
ಬಂಟ್ವಾಳ , ಶನಿವಾರ, 11 ನವೆಂಬರ್ 2017 (17:22 IST)
ಕಾಂಗ್ರೆಸ್ ನಾಯಕರನ್ನು ಟೀಕಿಸುವ ಭರದಲ್ಲಿ ಕೇಂದ್ರಸಚಿವ ಡಿ.ವಿ.ಸದಾನಂದಗೌಡ, ಪ್ರಧಾನಿ ಮೋದಿ ವಿರುದ್ಧವೇ ವಾಗ್ದಾಳಿ ನಡೆಸಿ ಅಚ್ಚರಿಗೆ ಕಾರಣರಾಗಿದ್ದಾರೆ. 
ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಭಾಷಣ ಮಾಡಿದ ಅವರು, ಕಾಂಗ್ರೆಸ್ ನಾಯಕರಿಗೆ ನಾಚಿಕೆಯಾಗಬೇಕು ಎನ್ನುವ ಬದಲಿಗೆ ಪ್ರಧಾನಿ ಮೋದಿಗೆ ನಾಚಿಕೆಯಾಗಬೇಕು ಎಂದು ಬಾಯಿತಪ್ಪಿ ವಾಗ್ದಾಳಿ ನಡೆಸಿದರು. ತಪ್ಪಿನ ಅರಿವಾದಾಗ ಕಾಲ ಮಿಂಚಿತ್ತು.
 
ನಿನ್ನೆ ಶ್ರೀರಾಮುಲು ಯಡವಟ್ಟು ಮಾಡಿಕೊಂಡಿದ್ದರೆ ಇಂದು ಬಂಟ್ವಾಳದ ಪರಿವರ್ತನಾ ಯಾತ್ರೆಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಯಡವಟ್ಟು ಮಾಡಿಕೊಂಡಿದ್ದಾರೆ.
 
ಶೋಭಾ ಕರಂದ್ಲಾಜೆ , ಬಿಎಸ್​ವೈ, ಡಿವಿಎಸ್ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡುವಂತಹ ಕೆಲಸ ಮಾಡಿದ್ದರು. ಇದನ್ನು ನೀವೆಲ್ಲರೂ ನೋಡಿದ್ದೀರಿ ಎಂದು ಭಾಷಣದ ವೇಳೆ ಸಂಸದ ಶ್ರೀರಾಮುಲು ಯಡವಟ್ಟು ಹೇಳಿಕೆ ನೀಡಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಈ ಗ್ರಾಮದಲ್ಲಿ ಹೆಂಡತಿ ಬಾಡಿಗೆಗೆ ದೊರೆಯುತ್ತಾಳೆ..! ನಿಮಗೆ ಗೊತ್ತಾ?