Publish Date: Sat, 11 Nov 2017 (14:08 IST)
Updated Date: Sat, 11 Nov 2017 (14:12 IST)
ಬಿಜೆಪಿಯವರಂತಹ ಭ್ರಷ್ಟ, ಕೊಳಕ ರಾಜಕಾರಣಿಗಳು ಬೇರೆ ಯಾರೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲಿನ ಭ್ರಷ್ಟಾಚಾರ ಆರೋಪ ಸಾಬೀತು ಮಾಡಿದ್ರೆ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ. ಬಿಜೆಪಿಯವರಿಗೆ ಧಮ್ಮಿದ್ದರೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲ್ ಹಾಕಿದ್ದಾರೆ.
ಸೋಮುವಾರದಿಂದ ಅಧಿವೇಶನ ಇದೆ. ಅಲ್ಲೇ ಚರ್ಚೆಗೆ ಬರಲಿ. ಬಿಜೆಪಿ.ಯವರು ನಯವಂಚಕರು, ಬೆಣ್ಣೆಯಲ್ಲಿನ ಕೂದಲು ತೆಗಿದಂಗೆ ತೆಗಿತಾರೆ ಎಂದು ಕಿಡಿಕಾರಿದರು.
ಬಿಜೆಪಿಯವರಲ್ಲಿ ಕೆಲವರು ಬ್ಲ್ಯೂಫಿಲ್ಮ್ ನೋಡಿದರು. ಕೆಲವರು ಹಲವಾರು ಆರೋಪಗಳನ್ನು ಎದುರಿಸುತ್ತಿದ್ದಾರೆ. ಇಂತಹ ನಾಯಕರಿಗೊಂದು ಶಿಸ್ತಿನ ಪಕ್ಷ ಎನ್ನುವ ಅಡ್ಡನಾಮ ಬೇರೆ ಕೇಡು ಎಂದು ವ್ಯಂಗ್ಯವಾಡಿದರು.
ಜೈಲಿಗೆ ಹೋಗಿ ಬಂದವರು ನಮ್ಮ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಇಂತಹ ನಾಯಕರಿಗೆ ಯಾವ ನೈತಿಕತೆಯಿದೆ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.