Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ವಿನೋದ್ ಕಾಂಬ್ಳಿ ನನ್ನ ಜೀವದ ಗೆಳೆಯ ಎಂದ ಸಚಿನ್ ತೆಂಡೂಲ್ಕರ್

webdunia
ಶನಿವಾರ, 11 ನವೆಂಬರ್ 2017 (13:43 IST)
ಮಹಾನ್ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿನೋದ್ ಕಾಂಬ್ಳಿ ಬಾಲ್ಯದಿಂದಲೂ ಕ್ರಿಕೆಟ್ ಕ್ಷೇತ್ರದಲ್ಲಿ ತಮ್ಮ ಪ್ರತಿಭೆ, ಸಾಮರ್ಥ್ಯವನ್ನು ಮೆರೆದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಿಂಚಿ ಅಭೂತಪೂರ್ವ ಸಾಧನೆಗೈದ ಕ್ರಿಕೆಟಿಗರಾಗಿದ್ದಾರೆ. ಇದೀಗ ವಿನೋದ್ ಕಾಂಬ್ಳಿ ನನ್ ಜೀವದ ಗೆಳೆಯ ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.
ಏತನ್ಮಧ್ಯೆ, ತನ್ನ ಕೆಟ್ಟ ಕಾಲದಲ್ಲಿ ಸಚಿನ್ ಸಹಾಯ ಮಾಡಲಿಲ್ಲ ಒಂದು ಟಿವಿ ಸಂದರ್ಶನದಲ್ಲಿ ಹೇಳಿದ ನಂತರ ಇಬ್ಬರ ನಡುವೆ ವೈಮನಸ್ಸು ಉಂಟಾಯಿತು. ಆದರೆ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಎಲ್ಲಾ ಅಸಮಾಧಾನಗಳನ್ನು ಬದಿಗಿಟ್ಟು ಕಾಂಬ್ಳಿ, ಅಜಿತ್ ಅಗರ್ಕರ್, ಅಮೋಲ್ ಮುಜುಮ್ದಾರ್ ಮತ್ತು ಇತರ ಸ್ನೇಹಿತರೊಂದಿಗೆ ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. 
 
ಸಚಿನ್ ತಮ್ಮ ಇನ್‌‌ಸ್ಟಾಗ್ರಾಂ ಪೋಸ್ಟ್‌ನಲ್ಲಿ, ಕ್ರಿಕೆಟ್ ನನಗೆ ಅತ್ಯಂತ ಅದ್ಭುತವಾದ ಜೀವದ ಗೆಳೆಯರನ್ನು ನೀಡಿದೆ. ಮೈದಾನದಲ್ಲಿ ಅಥವಾ ಹೊರಗೆ ನನಗೆ ಯಾವತ್ತೂ ಏಕಾಂಗಿತನ ಕಾಡಲೇ ಇಲ್ಲ ಎಂದು ತಿಳಿಸಿದ್ದಾರೆ. 
 
ಇದಕ್ಕಿಂತ ಮೊದಲು, ವಿನೋದ್ ಕಾಂಬ್ಳಿ, ಸಚಿನ್ ಎ ಬಿಲಿಯನ್ ಡ್ರೀಮ್ಸ್ ಅತ್ಮಕಥನ ಬಿಡುಗಡೆಯ ನಂತರ ತಮ್ಮ ಜೀವದ ಗೆಳೆಯ ಸಚಿನ್‌ನೊಂದಿಗಿರುವ ಹಳೆಯ ಫೋಟೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಿ ಡಿಯರ್ ಮಾಸ್ಟರ್ ಬ್ಲಾಸ್ಟರ್ ಐಲವ್ ಯೂ ಎಂದು ಕ್ಯಾಪ್ಶನ್ ಹಾಕಿದ್ದಾರೆ.
 
ಶಾರದಾಶ್ರಮ ವಿದ್ಯಾಮಂದಿರ ಶಾಲೆಯ ಪರವಾಗಿ ಕ್ರಿಕೆಟ್ ಜೋಡಿಯಾದ ವಿನೋದ್ ಕಾಂಬ್ಳಿ (349 *) ಮತ್ತು ಸಚಿನ್ ತೆಂಡೂಲ್ಕರ್ (326 *) ಎದುರಾಳಿ ಸೇಂಟ್ ಕ್ಸೇವಿಯರ್ಸ್ ಹೈಸ್ಕೂಲ್ ವಿರುದ್ಧ 664 ರನ್‌ಗಳ ವಿಶ್ವ ದಾಖಲೆ ಪಾಲುದಾರಿಕೆ ರನ್ ಪೇರಿಸಿ ಇತಿಹಾಸ ಸೃಷ್ಟಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

‘ಧೋನಿ ಬಗ್ಗೆ ಹೀಗೆಲ್ಲಾ ಹೇಳಕ್ಕೆ ನೀನ್ಯಾರಯ್ಯಾ?’!