Publish Date: Mon, 13 Nov 2017 (09:00 IST)
Updated Date: Mon, 13 Nov 2017 (09:01 IST)
ಚೆನ್ನೈ: ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಮತ್ತು ಆಪ್ತರ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆದ ಸಂದರ್ಭದಲ್ಲಿ ಶಾಕಿಂಗ್ ವಿವರಗಳು ಬಹಿರಂಗವಾಗಿದೆ.
ಐಟಿ ಅಧಿಕಾರಿಗಳು ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಜಯಲಲಿತಾ ಆಪ್ತೆಗೆ ಹಲವು ನಕಲಿ ಕಂಪನಿಗಳ ನಂಟು ಇದ್ದ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಶಶಿಕಲಾ ಸಂಬಂಧಿ ಹಾಗೂ ಜಯಾ ಟಿವಿ ವ್ಯವಸ್ಥಾಪಕ ವಿವೇಕ್ ಜಯರಾಮನ್ ಬಳಿ 100 ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳು ಪತ್ತೆಯಾಗಿದ್ದು, ನೋಟು ಅಮಾನ್ಯದ ಬಳಿಕ ಈ ಖಾತೆಗಳಲ್ಲಿ ಕೋಟ್ಯಂತರ ರೂಪಾಯಿ ಜಮೆಯಾಗಿರುವುದು ಪತ್ತೆಯಾಗಿದೆ. ಅಲ್ಲದೆ ಕೋಟ್ಯಂತರ ನಗದು, ಚಿನ್ನಾಭರಣ, 20 ಕ್ಕೂ ಹೆಚ್ಚು ನಕಲಿ ಕಂಪನಿಗಳ ಹೆಸರಲ್ಲಿ ಖಾತೆ ಪತ್ತೆಯಾಗಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಶಶಿಕಲಾಗೂ ಈ ನಕಲಿ ಕಂಪನಿಗಳ ಒಡನಾಟವಿತ್ತು ಎಂದು ಶಂಕಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ