Publish Date: Sat, 11 Nov 2017 (08:57 IST)
Updated Date: Sat, 11 Nov 2017 (08:59 IST)
ಚೆನ್ನೈ: ಜಯಾ ಟಿವಿ ಮತ್ತು ಶಶಿಕಲಾ ದಿನಕರನ್ ಆಪ್ತರಿಗೆ ಸಂಬಂಧಪಟ್ಟ ಆಸ್ತಿ ಪಾಸ್ತಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಭಾರೀ ಸುದ್ದಿಯಾಗಿತ್ತು. ಆದರೆ ಈ ದಾಳಿಗೆ ಮೊದಲು ಐಟಿ ಅಧಿಕಾರಿಗಳು ಬಂದಿದ್ದು ಹೇಗೆಂದು ಗೊತ್ತಾದರೆ ದಂಗಾಗುತ್ತೀರಿ.
ಆಡಳಿತಾರೂಢ ಸರ್ಕಾರ ಎಐಎಡಿಎಂಕೆ ಆಗಿರುವುದರಿಂದ ಐಟಿ ಅಧಿಕಾರಿಗಳು ಸುಳಿವೇ ಕೊಡದಿರಲು ಭಾರೀ ಸಾಹಸ ಮಾಡಿದ್ದಾರೆ. ಇದಕ್ಕಾಗಿ ಹಲವು ಕಾರುಗಳನ್ನು ಬಾಡಿಗೆಗೆ ಪಡೆದು ಅದನನ್ನು ಮದುವೆ ದಿಬ್ಬಣಕ್ಕೆ ಹೊರಡುವ ವಾಹನದಂತೆ ಸಿಂಗರಿಸಿದ್ದಾರೆ.
ಬಳಿಕ ಅದರ ಮೇಲೆ ಶ್ರೀನಿ ವೆಡ್ಸ್ ಮಹಿ ಎಂದು ಬರೆಯಿಸಿದ್ದಾರೆ. ಹೀಗಾಗಿ ಚೆಕ್ ಪೋಸ್ಟ್ ಗಳಲ್ಲಿ ಯಾವುದೇ ಅಡೆತಡೆಯಿಲ್ಲದೇ ವಾಹನ ಮುಂದೆ ಸಾಗಿದೆ. ಅಂತೂ ಸುಳಿವೇ ಕೊಡದೆ ಅಧಿಕಾರಿಗಳು ದಾಳಿ ನಡೆಸಿ ಸೈ ಎನಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ