Publish Date: Sat, 11 Nov 2017 (08:40 IST)
Updated Date: Sat, 11 Nov 2017 (08:41 IST)
ನ್ಯೂಯಾರ್ಕ್: ಭಾರತದ ಪ್ರಧಾನಿ ಮೋದಿ ಮೇಲೆ ದೊಡ್ಡಣ್ಣ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಗಳಿಕೆ ಸುರಿಮಳೆ ಸುರಿಸಿದ್ದಾರೆ. ಅಪೆಕ್ ಶೃಂಗದಲ್ಲಿ ಮಾತನಾಡಿದ ಟ್ರಂಪ್ ಪ್ರಧಾನಿ ಮೋದಿ ಗುಣಗಾನ ಮಾಡಿದ್ದಾರೆ.
ಪ್ರಧಾನಿ ಮೋದಿ ಭಾರತೀಯರನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಭಾರತ ವಿಶಾಲ ಆರ್ಥಿಕತೆಯ ರಾಷ್ಟ್ರ. ಈ ವಿಶಾಲ ದೇಶವನ್ನು ಒಗ್ಗೂಡಿಸುವುದರಲ್ಲಿ ಮೋದಿ ಪ್ರಧಾನ ಪಾತ್ರ ವಹಿಸಿದ್ದಾರೆ.
ಅದನ್ನು ಮೋದಿ ಯಶಸ್ವಿಯಾಗಿ ಮಾಡಿದ್ದಾರೆ ಕೂಡಾ. ಭಾರತ ಇಡೀ ಜಗತ್ತಿಗೇ ಹೊಸ ಆರ್ಥಿಕತೆಯ ಅವಕಾಶದ ಬಾಗಿಲು ತೆರೆದಿದೆ ಎಂದು ಅಧ್ಯಕ್ಷ ಟ್ರಂಪ್ ಹೊಗಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ