Select Your Language

Notifications

webdunia
webdunia
webdunia
webdunia

ಅಪರೂಪಕ್ಕೆ ಪ್ರಧಾನಿ ಮೋದಿಗೆ ಬೈದು, ರಾಹುಲ್ ಗಾಂಧಿ ಹೊಗಳಿದ ಶರದ್ ಪವಾರ್

ಅಪರೂಪಕ್ಕೆ ಪ್ರಧಾನಿ ಮೋದಿಗೆ ಬೈದು, ರಾಹುಲ್ ಗಾಂಧಿ ಹೊಗಳಿದ ಶರದ್ ಪವಾರ್
ನವದೆಹಲಿ , ಶನಿವಾರ, 11 ನವೆಂಬರ್ 2017 (08:14 IST)
ನವದೆಹಲಿ: ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಯುಪಿಎ ಮೈತ್ರಿಕೂಟದ ಪ್ರಮುಖ ಮಿತ್ರಪಕ್ಷದವರಾಗಿದ್ದರೂ ರಾಹುಲ್ ಗಾಂಧಿಯನ್ನು ಹೊಗಳಿದ್ದು ಕಡಿಮೆ.

 
ಆದರೆ ಇದೀಗ ಪ್ರಧಾನಿ ಮೋದಿಯನ್ನು ಲೇವಡಿ ಮಾಡಿ, ರಾಹುಲ್ ಗಾಂಧಿಗೆ ಜೈಕಾರ ಹಾಕಿದ್ದಾರೆ. ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲೂ ಯುಪಿಎ ಮಿತ್ರ ಪಕ್ಷವಾಗಿದ್ದುಕೊಂಡು ಆ ಪಕ್ಷದ ಬೆಂಬಲಿತ ಅಭ್ಯರ್ಥಿಗೆ ಮತ ಹಾಕದೇ ಎನ್ ಡಿಎ ಅಭ್ಯರ್ಥಿಗೆ ಮತ ಹಾಕಿದ್ದ ಶರದ್ ಪವಾರ್ ಇದೀಗ ರಾಹುಲ್ ಗಾಂಧಿಯನ್ನು ಹೊಗಳಿದ್ದಾರೆ.

ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಬಳಗ ನಿಖರತೆ ಕಾಯ್ದುಕೊಳ್ಳಲು ವಿಫಲವಾಗಿದ್ದಾರೆ ಎಂದ ಪವಾರ್, ಇದೀಗ ರಾಹುಲ್ ಗಾಂಧಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಒಬ್ಬ ನಾಯಕನಾಗಿ ಅವರ ಮಾತನ್ನು ಜನ ಕೇಳಲು ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರು ಸಕ್ರಿಯರಾಗಿದ್ದಾರೆ ಎಂದು ಪ್ರಶಂಸೆಯ ಸುರಿಮಳೆಗೈದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೆಳೆಯನ ವಿವಾಹದ ಖುಷಿಯಲ್ಲಿ ಗೆಳೆಯನ ಗುಪ್ತಾಂಗಕ್ಕೆ ಗುಂಡುಹಾರಿಸಿದ ಭೂಪ