Publish Date: Thu, 09 Nov 2017 (10:19 IST)
Updated Date: Thu, 09 Nov 2017 (10:21 IST)
ನವದೆಹಲಿ: ನೋಟು ಅಮಾನ್ಯ ಮಾಡಿ ದೇಶದ ಜನರಿಗೆ ತೊಂದರೆ ಮಾಡಿದ್ದಕ್ಕೆ ದೇಶದ ಜನರ ಕ್ಷಮೆ ಕೇಳಲು ತಯಾರಿದ್ದೀರಾ ಎಂದು ಬಹುಭಾಷಾ ನಟ ಪ್ರಕಾಶ್ ರೈ ಪ್ರಧಾನಿ ಮೋದಿಗೆ ಸವಾಲು ಹಾಕಿದ್ದಾರೆ.
ನೋಟು ಅಮಾನ್ಯಗೊಳಿಸಿ ನಿನ್ನೆ ವರ್ಷ ತುಂಬಿದ ಹಿನ್ನಲೆಯಲ್ಲಿ ಟ್ವೀಟ್ ಮಾಡಿದ ಪ್ರಕಾಶ್ ರಾಜ್ ನಿಮಗೆ ನೋಟು ನಿಷೇಧದಂತಹ ಅಸಂಬದ್ಧ ತೀರ್ಮಾನ ಕೈಗೊಂಡಿದ್ದಕ್ಕೆ ಪಶ್ಚಾತ್ತಾಪವಾಗುತ್ತಿಲ್ಲವೇ? ಅದಕ್ಕೆ ಕ್ಷಮೆ ಕೇಳಲು ನಿಮಗೇನಾದರೂ ಸಮಸ್ಯೆಯಾಗುತ್ತದಾ ಎಂದು ಪ್ರಕಾಶ್ ರೈ ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮೌನವಾಗಿರುವುದಕ್ಕೆ ಅವರು ನನಗಿಂತ ದೊಡ್ಡ ನಟ ಎಂದು ಟೀಕಿಸಿದ್ದರು. ಅದಾದ ಬಳಿಕ ತಾಜ್ ಮಹಲ್ ವಿಚಾರದಲ್ಲೂ ಕೇಂದ್ರವನ್ನು ಕೆಣಕಿದ್ದರು. ತದನಂತರ ಕಮಲ್ ಹಾಸನ್ ಹಿಂದೂ ಭಯೋತ್ಪಾದನೆ ಕುರಿತು ಹೇಳಿಕೆ ನೀಡಿದಾಗಲೂ ಸಮರ್ಥಿಸಿಕೊಂಡಿದ್ದರು. ಇದೀಗ ಮತ್ತೆ ಪ್ರಧಾನಿ ವಿರುದ್ಧ ಕಿಡಿ ಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ