Publish Date: Thu, 09 Nov 2017 (09:59 IST)
Updated Date: Thu, 09 Nov 2017 (10:01 IST)
ಸೂರತ್: ಗುಜರಾತ್ ಚುನಾವಣೆ ಪ್ರಚಾರಕ್ಕಾಗಿ ಸೂರತ್ ಗೆ ಆಗಮಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ‘ಮೋದಿ ಮೋದಿ’ ಸ್ಲೋಗನ್ ನ ಸ್ವಾಗತ ಸಿಕ್ಕಿದೆ.
ಸೂರತ್ ನ ಡೈಮಂಡ್ ಫ್ಯಾಕ್ಟರಿಗೆ ಭೇಟಿ ನೀಡಿದ ರಾಹುಲ್ ಗಾಂಧಿ ಜಿಎಸ್ ಟಿ ಮತ್ತು ನೋಟು ಅಮಾನ್ಯದ ಬಗ್ಗೆ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಜಿಎಸ್ ಟಿ ಮಸೂದೆಯಿಂದ ಸೂರತ್ ವರ್ತಕರು ಕಾಲು ಮುರಿದಂತಾಗಿದೆ. ಜಿಎಸ್ ಟಿ ಮತ್ತು ನೋಟು ಅಮಾನ್ಯ ನಿರ್ಧಾರಗಳು ದೇಶದ ಜನರಿಗೆ ಸಿಕ್ಕಿದ ಎರಡು ಆಘಾತಗಳು ಎಂದು ರಾಹುಲ್ ಟೀಕಿಸಿದ್ದಾರೆ. ಆದರೆ ರಾಹುಲ್ ಗಾಂಧಿ ಗುಜರಾತ್ ಟೆಕ್ಸ್ ಟೈಲ್ ಮಾರುಕಟ್ಟೆಗೆ ಭೇಟಿ ನೀಡಿದಾಗ ವರ್ತಕರು ‘ಮೋದಿ ಮೋದಿ’ ಎಂದು ಘೋಷಣೆ ಕೂಗಿ ಲೇವಡಿ ಮಾಡಿದ ವಿಡಿಯೋವನ್ನು ಬಿಜೆಪಿ ವಕ್ತಾರರು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ