Publish Date: Wed, 08 Nov 2017 (10:34 IST)
Updated Date: Wed, 08 Nov 2017 (10:38 IST)
ಬೆಂಗಳೂರು: ಬಿಜೆಪಿಯ 20 ಶಾಸಕರು ಕಾಂಗ್ರೆಸ್ ಗೆ ಬರಲು ರೆಡಿಯಾಗಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಹೇಳಿಕೆಯನ್ನು ಬಿಜೆಪಿ ಶಾಸಕ ಸಿಟಿ ರವಿ ಗೇಲಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಟಿ ರವಿ ‘ಮುಳುಗುತ್ತಿರುವ ಹಡಗನ್ನು ಏರಲು ಯಾರೂ ಹೋಗಿಲ್ಲ’ ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಸೇರುವುದು ಬಿಡಿ, ಕಾಂಗ್ರೆಸ್ ನಲ್ಲಿ ಪರಮೇಶ್ವರ್ ಅವರಿಗೇ ಅತ್ತು ಕರೆದು ಮಂತ್ರಿಯಾಗುವ ದುಸ್ಥಿತಿ ಬಂದಿದೆ. ಹೀಗಾಗಿ ಅವರು ಬಿಜೆಪಿ ಬರುವುದಿದ್ದರೆ ಬರಲಿ. ಆದರೆ ಆದಷ್ಟು ಬೇಗ ಬರಲಿ ಎಂದು ರವಿ ವ್ಯಂಗ್ಯವಾಗಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ