Select Your Language

Notifications

webdunia
webdunia
webdunia
webdunia

ಮತದಾರರನ್ನು ಸೆಳೆಯಲು ಬಿಜೆಪಿಯಿಂದ ಸೀರೆ, ಹಣ ಹಂಚಿಕೆ

ಮತದಾರರನ್ನು ಸೆಳೆಯಲು ಬಿಜೆಪಿಯಿಂದ ಸೀರೆ, ಹಣ ಹಂಚಿಕೆ
ಹಾಸನ , ಮಂಗಳವಾರ, 7 ನವೆಂಬರ್ 2017 (16:39 IST)
ಹಾಸನದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮತದಾರರನ್ನು ಸೆಳೆಯಲು ಬಿಜೆಪಿ ಸೀರೆ ಹಣ ಹಂಚಿಕೆ ಮುಂದಾಗಿರುವುದು ಮಾಧ್ಯಮಗಳ ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ.

ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ನಡೆಯುತ್ತಿರುವಂತೆ ಕೂಪನ್‌ಗಾಗಿ ಮಹಿಳೆಯರು ತಾಮುಂದು ನಾಮುಂದು ಎನ್ನುವಂತೆ ಮುಗಿಬಿದ್ದು ಕೂಪನ್ ಪಡೆದ ಘಟನೆ ನಡೆದಿದೆ.
 
ಒಂದು ಕೂಪನ್ ಪಡೆದಲ್ಲಿ ಒಂದು ಸೀರೆ ಮತ್ತು 500 ರೂಪಾಯಿ ಹಂಚಿಕೆ ನೀಡಲಾಗುತ್ತಿದೆ. ದೂರದ ಉರಿನಿಂದ ಬಂದ ಸಾವಿರಾರು ಮಹಿಳೆಯರು ಕೂಪನ್‌ ಪಡೆದು ಅಬ್ಬಾ ಕೊನೆಗೂ ಸಿಕ್ಕತು ಎನ್ನು ನಿಟ್ಟುಸಿರು ಬಿಟ್ಟಿದ್ದಾರೆ.
 
ಒಂದೆಡೆ ಕಾರ್ಯಕ್ರಮ ಮುಗಿದು ಬಿಜೆಪಿ ನಾಯಕರು ವೇದಿಕೆಯಿಂದ ಇಳಿಯುತ್ತಿದ್ದಂತೆ, ಮತ್ತೊಂದೆಡೆ ಸೀರೆ, ಹಣಕ್ಕಾಗಿ ಸಾವಿರಾರು ಮಹಿಳೆಯರು ಯುವಕರು ಮುಗಿಬಿದ್ದಿರುವುದು ಕಂಡು ಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪರಿಶೀಲನೆ ನಂತರ ಫೋನ್ ಟ್ಯಾಪಿಂಗ್ ಎಲ್ಲವೂ ತಿಳಿಯಲಿದೆ: ಪರಮೇಶ್ವರ್