Publish Date: Tue, 07 Nov 2017 (12:05 IST)
Updated Date: Tue, 07 Nov 2017 (12:07 IST)
ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ಹಾಜರಾಗದ ಹಿನ್ನೆಲೆಯಲ್ಲಿ ಗ್ರಾಮಾಂತರ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆಂಪೇಗೌಡ ಬಂಧನವಾಗಿದೆ.
ಚೆಕ್ ಬೌನ್ಸ್ ಮತ್ತು ವಂಚನೆ ಪ್ರಕರಣದಲ್ಲಿ ಕೋರ್ಟ್‌ಗೆ 2016ರಿಂದಲೂ ಕೆಂಪೇಗೌಡ ಹಾಜರಾಗಿರಲಿಲ್ಲ. ಹೀಗಾಗಿ ಆವಲಹಳ್ಳಿ ಪೊಲೀಸರು ಕೆಂಪೇಗೌಡ ನನ್ನ ಬಂಧಿಸಿದ್ದು, ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರು ಪಡಿಸಲಿದ್ದಾರೆ.
ಕೆಂಪೇಗೌಡ ವಿರುದ್ಧ ಸೆಪ್ಟಂಬರ್ 15ರಂದು ಕೆಂಪೇಗೌಡ ಬಂಧನಕ್ಕಾಗಿ ಕೋರ್ಟ್ ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು. ಆದರೆ ಸೆ.15ರಿಂದ ಇಲ್ಲಿಯವರೆಗೆ ಪೊಲೀಸರಿಗೆ ಸಿಗದೆ ಕೆಂಪೇಗೌಡ ತಲೆಮರೆಸಿಕೊಂಡಿದ್ದ ಎಂದು ತಿಳಿದು ಬಂದಿದೆ.