Publish Date: Mon, 06 Nov 2017 (19:33 IST)
Updated Date: Mon, 06 Nov 2017 (19:36 IST)
ಕಾಂಗ್ರೆಸ್ಸಿಗರು ಮನೆ ಮುರಿಯುವವರಲ್ಲ ಬಿಜೆಪಿಯವರಂತೆ. ಕಾಂಗ್ರೆಸ್ಸಿಗರು ಮನೆ ಮತ್ತು ಮನಸು ಕಟ್ಟುವವರು ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಅಂಜನೇಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರದ ಸಚಿವನಾಗಿ ಸಿಎಂ ಮತ್ತು ಸರಕಾರದ ಸಾಧನೆಗಳನ್ನು ಜನತೆಗೆ ತಿಳಿಸುವುದು ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.
ಬಿಜೆಪಿಯವರು ಜಾತಿ, ಜಾತಿಗಳ ಮಧ್ಯೆ ವೈಷಮ್ಯ ಹುಟ್ಟಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಾರೆ. ಆದರೆ, ಕಾಂಗ್ರೆಸ್ ಪಕ್ಷ ಜಾತಿ ಜಾತಿಗಳನ್ನು ಒಂದು ಗೂಡಿಸಿ ಸಂತಸದಿಂದ ಬಾಳುವಂತಾಗಲು ಸೌಹಾರ್ದ ವಾತಾವರಣ ನಿರ್ಮಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ದೇಶಾದ್ಯಂತ ಕೋಮುಗಲಭೆಯನ್ನು ಸೃಷ್ಟಿಸಿ ಹಿಂದು, ಮುಸ್ಲಿಂ ಸಮುದಾಯಗಳನ್ನು ಒಡೆದು ಅಧಿಕಾರಕ್ಕೆ ಬರಬೇಕು ಎನ್ನುವುದೇ ಬಿಜೆಪಿಯವರ ಹುನ್ನಾರವಾಗಿದೆ. ಆದರೆ, ರಾಜ್ಯದ ಜನತೆ ಬಿಜೆಪಿಯವರನ್ನು ಎಂದಿಗೂ ಅಧಿಕಾರಕ್ಕೆ ತರುವುದಿಲ್ಲ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಅಂಜನೇಯ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.