Publish Date: Tue, 07 Nov 2017 (11:19 IST)
Updated Date: Tue, 07 Nov 2017 (11:24 IST)
ಬೆಂಗಳೂರು: ನನ್ನ ಫೋನ್ ಕದ್ದಾಲಿಕೆ ಆಗುತ್ತಿದೆ. ಫಾಲೋ ಮಾಡುತ್ತಿದ್ದಾರೆ. ರಾಜಕೀಯಕ್ಕೆ ಬಂದಾಗಿನಿಂದ ನಿರಂತರವಾಗಿ ಕಣ್ಣಿಟ್ಟಿದ್ದಾರೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಸುದ್ದಿಗಾರರೊಮದಿಗೆ ಮಾತನಾಡಿದ ಅವರು, ನಿತ್ಯ ನನ್ನನ್ನ ಫಾಲೋ ಮಾಡ್ತಿದ್ದಾರೆ. ಎಲ್ಲಿ ಹೋಗ್ತೀನಿ ಅತ್ತ ಹಿಂದೆ ಬಿದ್ದಿದ್ದಾರೆ. ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ.
ಕೆಲವು ಸಂಸ್ಥೆಗಳಿಗೆ ಫೋನ್ ಟ್ರಾಪ್ ಮಾಡುವ ಅಧಿಕಾರ ಇರುತ್ತೆ. ಇಂತಹವರೇ ಫೋನ್ ಕದ್ದಾಲಿಕೆ ಮಾಡ್ತಿದ್ದಾರೆ ಅಂತ ಹೇಗೆ ಹೇಳೋದು. ನಾನು ಅಧಿಕಾರಕ್ಕೆ ಬಂದಾಗಲಿಂದ ಇಂತಹ ಪ್ರಯತ್ನಗಳು ನಡೀತಿವೆ ಎಂದರು.