Select Your Language

Notifications

webdunia
webdunia
webdunia
webdunia

ರೆಬಲ್ ಗಳಿಗೆ ಬಗ್ಗಲ್ಲ, ಕೊನೇ ಕ್ಷಣದಲ್ಲಿ ಬಂದವರಿಗೆ ಟಿಕೆಟ್ ಇಲ್ಲ: ಕುಮಾರಸ್ವಾಮಿ

ಎಚ್ ಡಿ ಕುಮಾರಸ್ವಾಮಿ
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷದ ಪ್ರಚಾರದ ಪೂರ್ವಭಾವಿಯಾಗಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಪೂಜೆ ಸಲ್ಲಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ರೆಬಲ್ ಗಳ ವಿರುದ್ಧ ಗುಡುಗಿದ್ದಾರೆ.

 
ರೆಬಲ್ ನಾಯಕರು ಜೆಡಿಎಸ್ ಹಿನ್ನಡೆಗೆ ಕಾರಣರಾಗಬಹುದೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ರೆಬಲ್ ನಾಯಕರಿಗೆ ಬಗ್ಗಲ್ಲ. ಆ ಕ್ಷೇತ್ರಗಳಲ್ಲಿ ಜನರೇ ನಮಗೆ ಬೆಂಬಲ ನೀಡಿ ಗೆಲ್ಲಿಸುತ್ತಾರೆ ಎಂದು ಕುಮಾರಸ್ವಾಮಿ ಖಡಕ್ ಆಗಿ ಹೇಳಿದ್ದಾರೆ.

ಅಷ್ಟೇ ಅಲ್ಲದೆ, ಕೊನೇ ಕ್ಷಣದಲ್ಲಿ ಪಕ್ಷಕ್ಕೆ ಬಂದವರಿಗೆಲ್ಲಾ ಟಿಕೆಟ್ ಸಿಗಲ್ಲ ಎಂದು ರೆಬಲ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನರ ಆಶೀರ್ವಾದದೊಂದಿಗೆ ಅಧಿಕಾರಕ್ಕೆ ಮರಳುವುದೇ ನಮ್ಮ ಗುರಿ. ಅದಕ್ಕೆ ಈ ಚಾಮುಂಡೇಶ್ವರಿ ತಾಯಿಯ ಆಶೀರ್ವಾದದೊಂದಿಗೆ ನಮ್ಮ ಪ್ರಯತ್ನ ಆರಂಭಿಸಲಿದ್ದೇವೆ ಎಂದು ಕುಮಾರಸ್ವಾಮಿ ಈ ಸಂದರ್ಭದಲ್ಲಿ ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆಗಾಗಿ ಮಾಂಸಾಹಾರವನ್ನೇ ಬಿಟ್ಟ ಸದಾನಂದ ಗೌಡ!