Select Your Language

Notifications

webdunia
webdunia
webdunia
Sunday, 13 April 2025
webdunia

ಪದ್ಮಾವತಿ ಚಿತ್ರ ಪ್ರದರ್ಶಿಸಿದ್ರೆ ಥಿಯೇಟರ್ ಸುಟ್ಟು ಹಾಕ್ತೇವೆ: ಬಿಜೆಪಿ ಶಾಸಕ

ಬಿಜೆಪಿ
ತೆಲಂಗಾಣಾ , ಮಂಗಳವಾರ, 7 ನವೆಂಬರ್ 2017 (19:17 IST)
ಪದ್ಮಾವತಿ ಚಿತ್ರದಲ್ಲಿ ನಿರ್ದೆಶಕ ಸಂಜಯ್ ಲೀಲಾ ಬನ್ಸಾಲಿ ಸತ್ಯವನ್ನು ವಿರೂಪಗೊಳಿಸಿ ನಿರ್ಮಿಸಿದ್ದು. ಚಿತ್ರವನ್ನು ಪ್ರದರ್ಶಿಸುವ ಥಿಯೇಟರ್‌ಗಳನ್ನು ಸುಟ್ಟುಹಾಕುತ್ತೇವೆ ಎಂದು ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಬೆದರಿಕೆಯೊಡ್ಡಿದ್ದಾರೆ. 

ಇದು ರಾಜ್‌ಪೂತ್ ಸಮುದಾಯದ ಗೌರವದ ಪ್ರಶ್ನೆ. ನಂತರ ಏನಾಗುತ್ತದೆಯೋ ಕಾದು ನೋಡುತ್ತೇವೆ ಎಂದು ರಾಜಸ್ಥಾನ್ ರಾಜಪೂತ್ ಸಮುದಾಯ ಆಯೋಜಿಸಿದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
 
ಪದ್ಮಾವತಿ ಚಿತ್ರದಲ್ಲಿ ರಾಜಪೂತ್ ಸಮುದಾಯದ ಗೌರವಕ್ಕೆ ಧಕ್ಕೆ ತರುವ ದೃಶ್ಯಗಳಿದ್ದಲ್ಲಿ ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆ ಮಾಡಲು ಬಿಡುವುದಿಲ್ಲ. ಮೊದಲು ಚಿತ್ರ ನಮಗೆ ತೋರಿಸಿ. ಚಿತ್ರದಲ್ಲಿ ಯಾವುದೇ ಅಂತಹ ದೃಶ್ಯಗಳಿಲ್ಲವಾದಲ್ಲಿ ಚಿತ್ರ ಬಿಡುಗಡೆಗೆ ಅನುಮತಿ ನೀಡಲಾಗುವುದು ಎಂದು ಹೇಳಿದ್ದಾರೆ.
 
ಮಹಿಳೆಯನ್ನು ಅಗೌರವಗೊಳಿಸಿ ಹಣ ಮಾಡಬೇಕು ಎನ್ನುವ ನಿರ್ದೇಶಕರನ್ನು ಎಲ್ಲರೂ ಒಂದಾಗಿ ಬಹಿಷ್ಕಾರ ಹಾಕಬೇಕು. ಹಿಂದು ಧರ್ಮ ಪಾಲಿಸುವವರು ಚಿತ್ರವನ್ನು ಬಹಿಷ್ಕರಿಸುವುದಲ್ಲದೇ ಚಿತ್ರ ಬಿಡುಗಡೆ ಮಾಡಲು ಬಿಡಬಾರದು ಎಂದು ಕರೆ ನೀಡಿದ್ದಾರೆ.
 
ಪದ್ಮಾವತಿ ಚಲನಚಿತ್ರ ದೇಶದ ಸಂಸ್ಕೃತಿಗೆ ಹಾನಿ ಮಾಡುವ ಪ್ರಯತ್ನವಾಗಿದೆ. ರಾಷ್ಟ್ರ, ಹಿಂದೂ ಧರ್ಮ ಮತ್ತು ಹಿಂದೂ ಸಮಾಜದ ಘನತೆಯನ್ನು ರಕ್ಷಿಸಲು ಹೋರಾಟ ಮಾಡುವಂತೆ ಯುವಕರಿಗೆ ಬಿಜೆಪಿ ಶಾಸಕ ಟಿ.ರಾಜಾಸಿಂಗ್ ಕರೆ ನೀಡಿದ್ದಾರೆ. ಚಿತ್ರ ಡಿಸೆಂಬರ್ 1 ರಂದು ಬಿಡುಗಡೆಯಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹಾಲಿವುಡ್ ನಲ್ಲಿ ಸುದೀಪ್ ಶೈನಿಂಗ್: ರೈಸನ್ ಚಿತ್ರದಪೋಸ್ಟರ್ ಔಟ್