Publish Date: Wed, 08 Nov 2017 (14:11 IST)
Updated Date: Wed, 08 Nov 2017 (14:14 IST)
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅಮಿತ್ ಷಾ ಜೊತೆಯಲ್ಲೇ ಇದ್ದಾರೆ. ಇಬ್ಬರಿಗೂ ಕ್ರಿಮಿನಲ್ ಮೈಂಡ್ ಜಾಸ್ತಿ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಫ್ರೀಡಂಪಾರ್ಕ್ ನಲ್ಲಿ ಮಾತನಾಡಿದ ಅವರು, ಕಪ್ಪು ಹಣ ಇಟ್ಟವರ ನಿದ್ದೆಗೆಡಿಸಿದ್ದೀನಿ ಎಂದು ಮೋದಿ ಹೇಳಿದ್ರು. ಆದ್ರೆ ಎಟಿಎಂ ಮುಂದೆ ನಿಂತು ಜನಸಾಮಾನ್ಯರು ನಿದ್ದೆಗೆಟ್ಟರು. ಟಾಟಾ ಬಿರ್ಲಾ, ಅಂಬಾನಿ ಅಂಥವರು ಎಟಿಎಂ ಮುಂದೆ ನಿಂತಿಲ್ಲ. ಅವರೆಲ್ಲ ಮೋದಿ ಜೊತೆ ಓಡಾಡಿಕೊಂಡಿದ್ದಾರೆ. 100 ಕ್ಕೂ ಹೆಚ್ಚು ಜನ ಬಡವರು ಸತ್ತಿದ್ದಾರೆ ಎಂದರು.
ಬಿಜೆಪಿ ಕಟ್ಟಿದ ಆಡ್ವಾನಿ ಸೇರಿದಂತೆ ಬಿಜೆಪಿ ಪ್ರಮುಖರೆಲ್ಲ ಮೂಲೆಗುಂಪಾದ್ರು. ಷಾ ಮಗ ಜೈ ಷಾ ಕಂಪೆನಿ ಮೂಲಕ ಎಷ್ಟು ಕಪ್ಪುಹಣ ಬಿಳಿ ಹಣ ಆಗಿದೆ ಹೇಳಬೇಕು. ಸ್ವತಃ ಜೈಲಿಗೆ ಹೋದ ಆಸಾಮಿ ಅಮಿತ್ ಷಾ, ಸಿದ್ದರಾಮಯ್ಯನ ಸರ್ಕಾರ ಭ್ರಷ್ಟ ಸರ್ಕಾರ ಎನ್ನುತ್ತಾರೆ. ಅದನ್ನ ಯಡಿಯೂರಪ್ಪ ಕೂಡ ಶುರು ಮಾಡಿದ್ರು. ನಾಚಿಕೆ ಮಾನ ಮರ್ಯಾದೆ ಇದ್ರೆ ಜನರಿಗೆ ಹೇಗೆ ಮುಖ ತೋರಿಸ್ತಾರೋ. ಶೆಟ್ಟರ್ ಅಂತಾ ಒಬ್ನು ಆಸಾಮಿ ಇದಾನೆ. ಅವನು ಸಿದ್ದರಾಮಯ್ಯನ ಸಾಧನೆ ಶೂನ್ಯ ಎನ್ನುತ್ತಾನೆ ಎಂದು ಏಕವಚನ ಬಳಸಿದರು.