Select Your Language

Notifications

webdunia
webdunia
webdunia
webdunia

ನೋಟ್ ಬ್ಯಾನ್ ಗೆ ವರ್ಷ ಹಿನ್ನೆಲೆ: ಕೆಪಿಸಿಸಿಯಿಂದ ನಾಳೆ ಕರಾಳ ದಿನಾಚರಣೆ

ನೋಟ್ ಬ್ಯಾನ್ ಗೆ ವರ್ಷ ಹಿನ್ನೆಲೆ: ಕೆಪಿಸಿಸಿಯಿಂದ ನಾಳೆ ಕರಾಳ ದಿನಾಚರಣೆ
ಬೆಂಗಳೂರು , ಮಂಗಳವಾರ, 7 ನವೆಂಬರ್ 2017 (15:44 IST)
ಬೆಂಗಳೂರು: ನೋಟ್ ಬ್ಯಾನ್ ಆಗಿ ಒಂದು ವರ್ಷ ಕಳೆದಿದ್ದು, ಇದ್ರಿಂದ ಸಾಮಾನ್ಯ ಜನರು, ರೈತರು, ಎಲ್ಲರೂ ನಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ನಾಳೆ ಕರಾಳ ದಿನಾಚರಣೆ ಆಚರಿಸಲಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪದಾಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ಪ್ರಧಾನಿ ಕಳೆದ ವರ್ಷ ನೋಟ್ ಬ್ಯಾನ್ ಮಾಡಿ ಏಕಾಏಕಿ ತೀರ್ಮಾನ ಕೈಗೊಂಡ್ರು. ಆ ನಷ್ಟವನ್ನು ಭರಿಸುವ ಶಕ್ತಿ ಮೋದಿಗೆ ಇದೆಯಾ. ಅವರು ಹೇಳಿದ್ದೂ ಯಾವುದೂ ಆಗಿಲ್ಲ, ಬರೀ ಸುಳ್ಳು ಹೇಳಿದ್ದಾರೆ. ಬಿಜೆಪಿ ನಾಳೆ ನೋಟ್ ಬ್ಯಾನ್ ಮಾಡಿದ್ದನ್ನು ಸೆಲಬ್ರೇಟ್ ಮಾಡಲು ಮುಂದಾಗಿದೆ. ವಿಶ್ವವೇ ಹೇಳ್ತಿದೆ ಮೋದಿ ನಿರ್ಧಾರ ಮೂರ್ಖತನದ ಪರಮಾವಾಧಿ ಎಂದು. ದೇಶದ ಇತಿಹಾಸದಲ್ಲಿ ಇದು ಕೆಟ್ಟ ಆರ್ಥಿಕ ತೀರ್ಮಾನ ಎಂದರು.

ಬಿಜೆಪಿ ನೋಟ್ ಬ್ಯಾನ್ ವಿಜೃಂಭಣೆಯಿಂದ ಆಚರಿಸಲು ಹೊರಟಿರೋದು ಉದ್ಧಟತನ. ನಾಳೆ ಕೆಪಿಸಿಸಿಯಿಂದ ಮೌರ್ಯ ವೃತ್ತದಿಂದ ಫ್ರೀಡಂ ಪಾರ್ಕ್ ವರೆಗೆ ರ್ಯಾಲಿ ಮಾಡ್ತೇವೆ. ಪ್ರಾಣಕಳೆದು ಕೊಂಡವರಿಗೆ ನಮನ ಸಲ್ಲಿಸ್ತೀವಿ. ನಾಳೆ ಸಂಜೆ ಬ್ರಿಗೇಡ್ ರಸ್ತೆಯ ವಾರ್ ಮೆಮೋರಿಯಲ್ ಬಳಿ ನಮನ ಸಲ್ಲಿಸಲಿದ್ದೇವೆ ಎಂದರು.

ವಿ.ಎಸ್.ಉಗ್ರಪ್ಪ ಮಾತನಾಡಿ, ದೇಶದ ಎಕಾನಮಿ ಇತಿಹಾಸದಲ್ಲಿ ಕರಾಳ ರಾತ್ರಿ ಇದ್ರೆ ಅದು 8 ನವೆಂಬರ್ 2017.  ಪ್ರಧಾನಿ ರಿಸರ್ವ್ ಬ್ಯಾಂಕ್ ಅಫ್ ಇಂಡಿಯಾ ಆಕ್ಟ್ ಗೆ ವಿರುದ್ಧವಾಗಿ ಸರ್ವಾಧಿಕಾರಿ ರೀತಿಯಲ್ಲಿ ನೋಟ್ ಬ್ಯಾನ್ ಮಾಡಿದ್ದಾರೆ. ದೇಶದ ಆರ್ಥಿಕತೆ ಮೇಲೆ ಮೋದಿ ಚಪ್ಪಡಿ ಎಳೆದಿದ್ದಾರೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಜನಾರ್ದನ ರೆಡ್ಡಿ ಜಾಮೀನು ರದ್ದಿಗೆ ಎಸ್‌‍ಐಟಿ ಮನವಿ