ಕೇಂದ್ರ ಸರಕಾರದ ನೋಟು ನಿ|ಷೇಧ ಮತ್ತು ಜಿಎಸ್‌ಟಿ ಜಾರಿಯಂತಹ ಅವಳಿ ತೀರ್ಮಾನಗಳು ದೇಶದ ಆರ್ಥಿಕತೆಯನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
 
									
										
								
																	
	ಕಳೆದ  ವರ್ಷದ ನವೆಂಬರ್ 8 ರಂದು ಜಾರಿಗೊಳಿಸಿದ ನೋಟು ನಿಷೇಧ ದಿನವನ್ನು ಕಪ್ಪು ಹಣ ವಿರೋಧಿ ದಿನವನ್ನಾಗಿ ಆಚರಿಸುವ ಬಿಜೆಪಿ ನಿರ್ಧಾರದ ವಿರುದ್ಧ ಗುಡುಗಿರುವ ಅವರು, ಮೊದ್ಲು ನೋಟು ನಿಷೇಧ ದುರಂತವೆಂದು ಒಪ್ಪಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.  
 
									
			
			 
 			
 
 			
					
			        							
								
																	
	 
	ನವೆಂಬರ್ 8 ದೇಶಕ್ಕೆ ಅತ್ಯಂತ ನಿರಾಶೆಯ ದಿನ. ಆದರೆ, ಬಿಜೆಪಿಯವರು ನವೆಂಬರ್ 8 ರಂದು ಕಪ್ಪು ಹಣ ವಿರೋಧಿ ದಿನವನ್ನಾಗಿ ಆಚರಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಅವರು ಸಂಭ್ರಮ ಆಚರಿಸಲು ನನಗಂತೂ ಯಾವ ಕಾರಣಗಳು ಕಾಣುತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ.
 
									
										
								
																	
	 
	ದೇಶದಲ್ಲಿರುವ ಬಡವರು, ಶೋಷಿತರು, ದುರ್ಬಲರು ಎಂತಹ ಕಷ್ಟಗಳಿಂದ ಸಾಗುತ್ತಿದ್ದಾರೆ ಎನ್ನುವ ನೋವು ಅರಿಯುವಲ್ಲಿ ಪ್ರಧಾನಿ ಮೋದಿ ವಿಫಲವಾಗಿದ್ದಾರೆ. ಮೋದಿ ಇಲ್ಲಿಯವರೆಗೆ ನೋಟು ನಿಷೇಧ ದುರಂತವೆಂದು ಒಪ್ಪಿಕೊಳ್ಳಲು ಸಿದ್ದರಿಲ್ಲ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
 
									
											
							                     
							
							
			        							
								
																	
	
	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.