Publish Date: Mon, 30 Oct 2017 (09:29 IST)
Updated Date: Mon, 30 Oct 2017 (09:33 IST)
ಮಂಗಳೂರು: ಇತ್ತೀಚೆಗಷ್ಟೇ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಮಧ್ಯಾಹ್ನ ಮಾಂಸದೂಟ ಮಾಡಿ ದೇವರ ದರ್ಶನ ಮಾಡಿದ್ದು ವಿವಾದಕ್ಕೆಡೆ ಮಾಡಿತ್ತು. ಆದರೆ ಈ ಚರ್ಚೆ ಇದೀಗ ಮತ್ತೆ ಮುಂದುವರಿದಿದೆ.
ಅದಕ್ಕೆ ಕಾರಣ ನಿನ್ನೆ ಪ್ರಧಾನಿ ಮೋದಿ ನಿರಾಹಾರದಲ್ಲಿ ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಿರುವುದು. ಮಾಜಿ ಸಚಿವ ಅರವಿಂದ ಲಿಂಬಾವಳಿ ಪ್ರಧಾನಿ ಮೋದಿ ಮತ್ತು ಸಿಎಂ ಸಿದ್ದರಾಮಯ್ಯನವರ ನಡುವೆ ಇರುವುದು ಇದೇ ವ್ಯತ್ಯಾಸ ಎಂದು ಜರೆದಿದ್ದಾರೆ.
ಇನ್ನೊಂದೆಡೆ ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಉಪವಾಸದಲ್ಲಿ ಭಕ್ತಿಯಿಂದ ಮಂಜುನಾಥನ ದರ್ಶನಗೈದ ಪ್ರಧಾನಿ ಮೋದಿ ಎದುರು ಇದೇ ದೇವಾಲಯದ ಸನ್ನಿಧಿಗೆ ಬರಲು ಮೀನಿನೂಟ ಮಾಡಿ ಬಂದಿದ್ದ ಸಿಎಂ ಸಿದ್ದರಾಮಯ್ಯಗೆ ನಾಚಿಕೆಯಾಗಿರಬೇಕು. ಅದಕ್ಕೇ ನೆಪ ಹೇಳಿ ಕಾರ್ಯಕ್ರಮಕ್ಕೆ ಬರಲಿಲ್ಲ ಎಂದು ಕೆಲವು ಟೀಕಿಸಿದ್ದಾರೆ. ಇನ್ನು ಕೆಲವರು ಸಿಎಂ ಸಿದ್ದರಾಮಯ್ಯನವರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ