Publish Date: Sun, 29 Oct 2017 (13:37 IST)
Updated Date: Sun, 29 Oct 2017 (13:39 IST)
ಮಂಡ್ಯ: ನನ್ನನ್ನು ಕರೆದಿದ್ದರೆ ಹೋಗುತ್ತಿದ್ದೆ, ಕರೆಯದೇ ಹೋಗಲಾಗುತ್ತಾ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ತೂಬಿನಕೆರೆಯ ಹೆಲಿಪ್ಯಾಡ್ ನಲ್ಲಿ ಧರ್ಮಸ್ಥಳದಲ್ಲಿ ನಡೆದ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮಕ್ಕೆ ಗೈರು ಬಗ್ಗೆ ಪ್ರತಿಕ್ರಿಯಿಸಿ ಅವರು, ಕಾರ್ಯಕ್ರಮಕ್ಕೆ ನನ್ನನ್ನು ಕರೆದಿಲ್ಲ. ಅದು ಧರ್ಮಸ್ಥಳದಲ್ಲಿ ನಡೆಯುತ್ತಿರುವ ಖಾಸಗಿ ಕಾರ್ಯಕ್ರಮ. ಪ್ರಧಾನಿ ನರೇಂದ್ರ ಮೋದಿ ಭೇಟಿ ವಿಧಾನಸಭೆ ಚುನಾವಣೆ ಮೇಲೆ ಪ್ರಭಾವ ಬೀರಲ್ಲ ಎಂದರು.
ಸಂಸದೆ ಶೋಭಾ ಕರಂದ್ಲಾಜೆಗೆ ಮಂಪರು ಪರೀಕ್ಷೆ ಮಾಡಿಸಬೇಕು. ಸದನ ಸಮಿತಿ ವರದಿ ಬರುವ ಮೊದಲೇ ಶೋಭಾ ಕರಂದ್ಲಾಜೆ ಚಡಪಡಿಸಲು ಶುರು ಮಾಡಿದ್ದಾರೆ. ಈ ಹಿಂದೆ ಇಂಧನ ಸಚಿವೆಯಾಗಿದ್ದ ಶೋಭಾಗೆ ಗಿಲ್ಟ್ ಕಾಡುತ್ತಿದೆ ಎಂದರು.