ನವದೆಹಲಿ: ಪ್ರಧಾನಿ ಮೋದಿ ಭಾಷಣ ಕಲೆಗಾರಿಕೆ ಬಗ್ಗೆ ಎರಡು ಮಾತಿಲ್ಲ. ಅದನ್ನು ಇದೀಗ ರಾಹುಲ್ ಗಾಂಧಿ ಕೂಡಾ ಒಪ್ಪಿದ್ದಾರೆ. ಆದರೆ ಇದು ಹೊಗಳಿಕೆ ಅಲ್ಲ. ಲೇವಡಿ!
‘ಮೋದಿ ಥರಾ ಲೆಕ್ಚರ್ ಕೊಡೋಕೆ ನನಗೆ ವರ್ಷಗಟ್ಟಲೆ ಸಮಯ ಬೇಕು. ಆದರೆ ನನಗೆ ಜನರ ಸಮಸ್ಯೆ ಆಲಿಸಲು ಮತ್ತು ಅದನ್ನು ಪರಿಹರಿಸಲು ಇಷ್ಟ’ ಎಂದು ರಾಹುಲ್ ಹೇಳಿದ್ದಾರೆ.
‘ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಇದೇ ವ್ಯತ್ಯಾಸ. ಅವರಿಗೆ ಭಾಷಣ ಬಿಗಿಯಲು ಮಾತ್ರ ಇಷ್ಟ. ಕಾಂಗ್ರೆಸ್ ಗೆ ಜನರ ಸಮಸ್ಯೆ ಆಲಿಸಿ ಪರಿಹರಿಸಲು ಇಷ್ಟ’ ಎಂದು ರಾಹುಲ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ