Publish Date: Sat, 25 Nov 2017 (08:12 IST)
Updated Date: Sat, 25 Nov 2017 (08:14 IST)
ಬೆಂಗಳೂರು: ಕಿಚ್ಚ ಸುದೀಪ್ ನಿರ್ಮಾಣದಲ್ಲಿ ಮೂಡಿಬರಲಿರುವ ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾ ಮುಹೂರ್ತ ಕಾರ್ಯಕ್ರಮ ನೆರವೇರಿದೆ. ಈ ಸಂದರ್ಭದಲ್ಲಿ ಸುಮಲತಾ ಅಂಬರೀಷ್ ಗೆ ಕಿಚ್ಚ ಸುದೀಪ್ ಒಂದು ಹೊಗಳಿಕೆ ಕೊಟ್ಟಿದ್ದಾರೆ.
ಚಿತ್ರ ಸೆಟ್ಟೇರಿದ ಖುಷಿಯಲ್ಲಿ ಸುಮಲತಾ ಅಂಬರೀಷ್ ಸುದೀಪ್ ಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್ ಅಂಬಿ ಮಾಮನ ಇಷ್ಟು ಚೆನ್ನಾಗಿ ನೋಡ್ಕೊಳ್ಳುವಲ್ಲಿ ನಿಮ್ಮ ಪಾತ್ರವೇ ದೊಡ್ಡದು ಎಂದು ಹೊಗಳಿದ್ದಾರೆ.
ಅಂದ ಹಾಗೆ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದಲ್ಲಿ ಅಂಬರೀಷ್ ಯುವಕನಾಗಿದ್ದಾಗ ಇದ್ದ ಪಾತ್ರವನ್ನು ಸುದೀಪ್ ನಿರ್ವಹಿಸಲಿದ್ದಾರೆ. ಅಂಬೀರಷ್ ಮತ್ತು ಸುದೀಪ್ ಮತ್ತೆ ಈ ಚಿತ್ರದಲ್ಲಿ ಒಂದಾಗಿ ನಟಿಸಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ