ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ಮತ್ತು ಪತ್ನಿ ಪ್ರಿಯಾಗೆ ಬಾಲಿವುಡ್, ಸ್ಯಾಂಡಲ್ ವುಡ್ ನ ಸ್ನೇಹಿತರು ಇಂದು ವಿಶ್ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಇವರ ವಿವಾಹ ವಾರ್ಷಿಕೋತ್ಸವ.
ಸುದೀಪ್ ಮತ್ತು ಪ್ರಿಯಾ ದಂಪತಿ ವಿವಾಹಕ್ಕೆ ಇಂದು 16 ನೇ ವರ್ಷದ ವಾರ್ಷಿಕೋತ್ಸವ ಆಚರಿಸುತ್ತಿದ್ದಾರೆ. ಹೀಗಾಗಿ ಚಿತ್ರರಂಗದ ಸ್ನೇಹಿತರು ಇವರಿಗೆ ಶುಭ ಹಾರೈಸುತ್ತಿದ್ದಾರೆ. ಇವರಿಬ್ಬರ ಸಂಬಂಧ ವಿಚ್ಛೇದನಕ್ಕೆವರೆಗೆ ಹೋಗಿ ಇತ್ತೀಚೆಗಷ್ಟೇ ಒಂದಾಗುವ ನಿರ್ಧಾರಕ್ಕೆ ಬಂದಿದ್ದರು. ಹೀಗಾಗಿ ಇಬ್ಬರಿಗೂ ಈ ವೆಡ್ಡಿಂಗ್ ಆನಿವರ್ಸರಿ ವಿಶೇಷವಾಗಿದೆ.
ಸುಮಲತಾ ಅಂಬರೀಷ್, ಜೋಗಿ ಪ್ರೇಮ್, ಜಗ್ಗೇಶ್, ಬಾಲಿವುಡ್ ನಟ ಅಫ್ತಾಬ್ ಶಿವದಾಸಿನಿ ಸೇರಿದಂತೆ, ಅಭಿಮಾನಿಗಳೂ ಕಿಚ್ಚ ಸುದೀಪ್ ದಂಪತಿಗೆ ಶುಭ ಹಾರೈಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ