Publish Date: Wed, 27 Dec 2017 (11:07 IST)
Updated Date: Wed, 27 Dec 2017 (11:11 IST)
ಬೆಂಗಳೂರು: ಮಹದಾಯಿ ನೀರಿಗಾಗಿ ರೈತರು ಮೂರು ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಕಲಾವಿದರು ಕಾಣಿಸುತ್ತಿಲ್ಲ ಎಂದು ಚಿತ್ರರಂಗದ ಇತರ ನಟರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ನಟ ಚೇತನ್ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ನಟ ಚೇತನ್ ರೈತರ ಹೋರಾಟದಲ್ಲಿ ಪಾಲ್ಗೊಂಡ ಬಳಿಕ ಚೇತನ್ ಇಂತಹದ್ದೊಂದು ಹೇಳಿಕೆ ನೀಡಿದ್ದರು. ಇದಕ್ಕೆ ನಟ ಜಗ್ಗೇಶ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಜಗ್ಗೇಶ್ ಈ ಬಗ್ಗೆ ಟ್ವೀಟ್ ಮಾಡಿದ್ದು ‘ಯಾಕೆ ಪಾಪ ಈತ ಹೀಗೆ..! ಪ್ರತಿ ನಡೆಯ ಉದ್ದೇಶ ಜಾಣ ಪ್ರೇಕ್ಷಕನಿಗೆ ಅರಿವಾಗಿದೆ. ತಮ್ಮತನ ವೃದ್ಧಿಸಿಕೊಳ್ಳುವ ಜಾತ್ರೆಗಿಂತ ಹೃದಯ ದೇವರು ಜನ ಮೆಚ್ಚುವಂತೆ ಮಾಡುವ ಕಾರ್ಯ ಶ್ರೇಷ್ಠ! ಬಣ್ಣ ಹಚ್ಚಿ ಹುಲಿಯಾದ ನರಿ ಕಥೆ ಆಗಬಾರದು ಬದುಕು..! ಎಂದು ತಪರಾಕಿ ನೀಡಿದ್ದಾರೆ.
ಇನ್ನು ಒಳ್ಳೆ ಹುಡುಗ ಪ್ರಥಮ್ ಕೂಡಾ ಖ್ಯಾತೆ ನಟ ಚೇತನ್ ಎಂದು ಕರೆದಿದ್ದು, ನಿಮಗ್ಯಾಕೆ ಯಡಿಯೂರಪ್ಪನವರನ್ನು ಕಂಡರೆ ಕೊತ ಕೊತ? ಮೈಕ್ ಸಿಕ್ಕಿದ ಕೂಡಲೇ ಆಕ್ಷನ್ ಹೀರೋ ರೇಂಜ್ ಗೆ ಹಾರಾಡಬೇಡಿ ಎಂದು ಕಿಡಿ ಕಾರಿದ್ದಾರೆ. ಇದಲ್ಲದೆ, ಅನೇಕ ಅಭಿಮಾನಿಗಳಿಗೂ ಚೇತನ್ ಗೆ ಸಾಮಾಜಿಕ ಜಾಲತಾಣದಲ್ಲಿ ಮಂಗಳಾರತಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ