Publish Date: Thu, 21 Dec 2017 (21:41 IST)
Updated Date: Thu, 21 Dec 2017 (21:47 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ನಟಿ ಸಂಯುಕ್ತ ಅವರು ಸಮೀರ್ ಆಚಾರ್ಯ ಅವರ ಮೇಲೆ ಹಲ್ಲೆಮಾಡಿರುವುದರ ಬಗ್ಗೆ ನಟ ಜಗ್ಗೇಶ ಅವರು ಕಿಡಿಕಾರಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಅತಿಥಿಯಾಗಿ ಆಗಮಿಸಿದ ಸಂಯುಕ್ತ ಅವರು ಟಾಸ್ಕನಲ್ಲಿ ಸಮೀರ್ ಆಚಾರ್ಯ ಅವರು ತನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಅವರ ಕಪಾಳಕ್ಕೆ ಹೊಡೆದಿದ್ದರು. ಬಿಗ್ ಬಾಸ್ ಮನೆಯ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಅವರನ್ನು ಮನೆಯಿಂದ ಹೊರಹಾಕಲಾಯಿತು.
ಈ ವಿಷಯ ತಿಳಿದ ಜಗ್ಗೇಶ್ ಅವರು ಸಂಯುಕ್ತ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಟಿ ಸಂಯುಕ್ತ ಅವರ ವರ್ತನೆ ನೋಡಿದರೆ ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿ ಕೊಡೆ ಹಿಡಿದ ಗಾದೆ ನೆನಪಿಗೆ ಬರುತ್ತದೆ. ತಾಳ್ಮೆಯಿಂದ ಇದ್ದ ಆಚಾರ್ಯರ ಮೇಲೆ ಹಲ್ಲೆ ಮಾಡಿದ ಈಕೆ ಕ್ಷಮೆಗೆ ಅರ್ಹಳಲ್ಲ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ