Select Your Language

Notifications

webdunia
webdunia
webdunia
webdunia

ತೈಮೂರ್ ಗೆ ಉಡುಗೊರೆಯಾಗಿ ಬಂದ ಫಾರೆಸ್ಟ್

ತೈಮೂರ್ ಗೆ ಉಡುಗೊರೆಯಾಗಿ ಬಂದ ಫಾರೆಸ್ಟ್
ಮುಂಬೈ , ಗುರುವಾರ, 21 ಡಿಸೆಂಬರ್ 2017 (20:57 IST)
ಮುಂಬೈ: ನಟಿ ಕರೀನಾ ಕಪೂರ್ ಅವರು ನ್ಯೂಟ್ರಿಷಿಯನ್ ರುಜುತಾ ದಿವಾಕರ್ ಅವರು ತೈಮೂರ್ ಗೆ ನೀಡಿದ ಉಡುಗೊರೆ ಬಗ್ಗೆ ಇನ್ಸ್ಟ್ರಾಗ್ರಾಮ್ ನಲ್ಲಿ ತಮಗಾದ ಖುಷಿ ಹಂಚಿಕೊಡಿದ್ದಾರೆ.

ಪಟೌಡಿಯಲ್ಲಿ  ಕರೀನಾ ಕಪೂರ್ ಹಾಗು ಸೈಫ್ ಅಲಿ ಖಾನ್ ಮಗ ತೈಮೂರ್ ನ ಮೊದನ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗಿದ್ದು, ರುಜುತಾ ಅವರು ತೈಮೂರ್ ಗೆ ಶುಭಕೋರಿ ಪೋಟೋವೊಂದನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ಹಾಕಿದ್ದಾರೆ. ತೈಮೂರ್ ಗೆ ಹಕ್ಕಿ, ಪಕ್ಷಿ, ಜೇನುನೊಣ, ಚಿಟ್ಟೆಗಳು ಮುಂಬೈನಲ್ಲಿ ನೋಡಲು ಸಿಗದ ಕಾರಣ ಈ ಸಣ್ಣ ಫಾರೆಸ್ಟ ಒಂದನ್ನು ಉಡುಗೊರೆಯಾಗಿ ನೀಡಿರುವುದಾಗಿ ಹೇಳಿದ್ದಾರೆ.


ಪಟೌಡಿಯಲ್ಲಿ ಈಗ ಈ ಸಣ್ಣ ಫಾರೆಸ್ಟ ಶುರುಮಾಡಲಾಗಿದೆ. ಹಾಗೆ ಪೋಟೋದಲ್ಲಿರುವಂತೆ ಬಾಳೆಗಿಡಗಳನ್ನು ನೆಡಲಾಗಿದೆ. ತೈಮೂರ್  ಗಿಡದಂತೆ ಬೆಳೆದು ಸಮಾಜಕ್ಕೆ ಮಾದರಿಯಾಗುತ್ತಾನೆ ಎಂಬುದು ಅವರ ನಂಬಿಕೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೊಡೀತೀನಿ ಅಂತ ಮೊದಲೇ ವಾರ್ನಿಂಗ್ ಕೊಟ್ಟಿದ್ದರು ಸಂಯುಕ್ತಾ!