Select Your Language

Notifications

webdunia
webdunia
webdunia
webdunia

‘ಲಗಾನ್’ ನಲ್ಲಿ ನಟಿಸಿದ ಶ್ರೀವಲ್ಲಭ ವ್ಯಾಸ್ ಅವರು ಇನ್ನಿಲ್ಲ

‘ಲಗಾನ್’ ನಲ್ಲಿ ನಟಿಸಿದ ಶ್ರೀವಲ್ಲಭ ವ್ಯಾಸ್ ಅವರು ಇನ್ನಿಲ್ಲ
ಜೈಪುರ , ಸೋಮವಾರ, 8 ಜನವರಿ 2018 (06:49 IST)
ಜೈಪುರ: ಅಮೀರ್ ಖಾನ್ ಅಭಿನಯದ ಹಿಂದಿ ಚಿತ್ರ ‘ಲಗಾನ್’ ನಲ್ಲಿ ಮುಖ್ಯ ಪ್ರಾತ್ರವೊಂದರಲ್ಲಿ ನಟಿಸಿದ್ದ ಶ್ರೀವಲ್ಲಭ ವ್ಯಾಸ್ ಅವರು ಜೈಪುರದಲ್ಲಿ ನಿನ್ನೆ (ಭಾನುವಾರ) ನಿಧನರಾದರು.


ಇವರು ‘ವಿರಾಸತ್’, ‘ಸರ್ಫರೋಶ್’, ‘ಅಭಯ್’, ’ಶೂಲ್’, ’ದಿ ಫರ್ಗಾಟನ್’ ಮೊದಲಾದ 60 ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದು, ಟಿ.ವಿ. ಶೋ ಹಾಗು ರಂಗಭೂಮಿಯಲ್ಲಿ ಸಾಂದರ್ಭಿಕ ಪ್ರದರ್ಶನಗಳನ್ನು ಅವರು ನೀಡಿದ್ದರು. ಪ್ರಾದೇಶಿಕ ಸಿನಿಮಾಗಳಲ್ಲಿಯೂ ಕೂಡ ಅವರು ಕಾಣಿಸಿಕೊಂಡಿದ್ದರು. ಇವರು ಪತ್ನಿ ಶೋಭಾ ಹಾಗು ಇಬ್ಬರು ಪುತ್ರಿಯರನ್ನು ಅಗಲಿದ್ದು, ಅವರ ನಿಧನಕ್ಕೆ ಇಡಿ ಬಾಲಿವುಡ್ ಚಿತ್ರರಂಗ ಸಂತಾಪ ಸೂಚಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅನುಷ್ಕಾ ಶರ್ಮಾ ಪತಿ ವಿರಾಟ್ ಅವರನ್ನು ಬಿಟ್ಟು ಭಾರತಕ್ಕೆ ಮರಳಿದ್ದು ಯಾಕೆ ಗೊತ್ತಾ...?