Select Your Language

Notifications

webdunia
webdunia
webdunia
webdunia

ಹಿರಿಯ ಪೋಷಕ ನಟ ವೇಣುಗೋಪಾಲ್ ಇನ್ನಿಲ್ಲ

ಹಿರಿಯ ಪೋಷಕ ನಟ ವೇಣುಗೋಪಾಲ್ ಇನ್ನಿಲ್ಲ
ಬೆಂಗಳೂರು , ಮಂಗಳವಾರ, 24 ಅಕ್ಟೋಬರ್ 2017 (15:46 IST)
ಬೆಂಗಳೂರು: ಕನ್ನಡದ ಹಲವು ಚಿತ್ರಗಳಲ್ಲಿ ಪೋಷಕ ನಟ, ಖಳನಟನಾಗಿ ಅಭಿನಯಿಸಿದ್ದ ಹಿರಿಯ ಕಲಾವಿದ ವೇಣುಗೋಪಾಲ್ ವಿಧಿವಶರಾಗಿದ್ದಾರೆ.

ವೇಣುಗೋಪಾಲ್ ಇಂದು ಬೆಳ್ಳಗೆ 8.30ರ ಸುಮಾರಿಗೆ ಕತ್ರಿಗುಪ್ಪೆಯ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಐವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಇವರು, 'ಸೂರಪ್ಪ', 'ರಾಜನರಸಿಂಹ', 'ಕೋಟಿಗೊಬ್ಬ' ಸಿನಿಮಾಗಳಲ್ಲಿ ಮಿಂಚಿದ್ದರು. ಕೊನೆಯದಾಗಿ 'ಶುದ್ಧಿ' ಚಿತ್ರದಲ್ಲಿ ನಟಿಸಿದ್ದರು.

ಕೇವಲ ಚಲನಚಿತ್ರಗಳು ಮಾತ್ರವಲ್ಲದೆ ಮನೆತನ, ಜನನಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ನಾಳೆ ವೇಣುಗೋಪಾಲ್ ಅಂತ್ಯಕ್ರಿಯೆ ನಡೆಯಲಿದೆ. ವೇಣುಗೋಪಾಲ್ ಅವರಿಗೆ ಪವನ್ ಮತ್ತು ಹೇಮಂತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಬಾರಿಗೆ ಬಣ್ಣ ಹಚ್ಚಿದ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಚಾರಿತ್ರ್ಯ