Select Your Language

Notifications

webdunia
webdunia
webdunia
webdunia

ವಿಶ್ವದ ಧಡೂತಿ ಮಹಿಳೆ ಎಮಾನ್ ಅಹಮದ್ ಇನ್ನಿಲ್ಲ

heaviest woman
ಅಬುಧಾಬಿ , ಸೋಮವಾರ, 25 ಸೆಪ್ಟಂಬರ್ 2017 (20:16 IST)
ಅಬುಧಾಬಿ: ವಿಶ್ವದ ಅತಿ ಹೆಚ್ಚು ತೂಕದ ಮಹಿಳೆ ಈಜಿಪ್ಟ್ ನ ಎಮಾನ್ ಅಹಮದ್(37) ಅಬುಧಾಬಿಯ ಬುರ್ಜಿಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಬುಹುಅಂಗಾಂದ ವೈಫಲ್ಯದಿಂದ ಬಳಲುತ್ತಿದ್ದ ಎಮಾನ್, ಕಳೆದ ವಾರವಷ್ಟೇ ತಮ್ಮ 37 ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇತ್ತೀಚೆಗಷ್ಟೇ ತಮ್ಮ ಧಡೂತಿ ದೇಹವನ್ನು ಇಳಿಸಿಕೊಳ್ಳುವ ನಿಟ್ಟಿನಲ್ಲಿ ಈಜಿಪ್ಟ್ ನಿಂದ ಮುಂಬೈನ ಸೈಫಿ ಆಸ್ಪತ್ರೆಗೆ ದಾಖಲಾಗಿದ್ದರು. 300ಕ್ಕೂ ಹೆಚ್ಚು ತೂಕವನ್ನೂ ಇಳಿಸಿಕೊಂಡಿದ್ರು.

504 ಕೆಜಿ ತೂಕವಿದ್ದ ಈಕೆ, ಮರಳಿ ಈಜಿಪ್ಟ್ ಗೆ ತೆರಳುವಾಗ ಅರ್ಧ ತೂಕ ಇಳಿದಿತ್ತು. ಮುಂಬೈನಲ್ಲಿ ಚಿಕಿತ್ಸೆ ಪಡೆದಿದ್ದ ಈಕೆ, 26 ವರ್ಷದ ಬಳಿಕ ತಾವೇ ಖುದ್ದು ಎದ್ದು ಊಟ ಮಾಡೋಕೆ ಕುಳಿತಿದ್ರು. ಆದ್ರೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಎಮಾನ್ ಇಹಲೋಕ ತ್ಯಜಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್‌ಬಿಐ ಉಳಿತಾಯ ಖಾತೆಯ ಕನಿಷ್ಠ ಠೇವಣಿ ಇಳಿಕೆ