Select Your Language

Notifications

webdunia
webdunia
webdunia
webdunia

242 ಕೆ.ಜಿ ತೂಕ ಕಳೆದುಕೊಂಡ ಈಜಿಫ್ಟಿಯನ್ ಮಹಿಳೆ ಎಮನ್

Eman Ahmed Abdulati
ಮುಂಬೈ , ಬುಧವಾರ, 12 ಏಪ್ರಿಲ್ 2017 (12:29 IST)
ಜಗತ್ತಿನ ಅತ್ಯಂತ ತೂಕದ ಮಹಿಳೆ ಎಮನ್ ಅಹಮ್ಮದ್ ಅಬ್ದುಲಾತಿ ಬೇಗ ಚೇತರಿಸಿಕೊಳ್ಳುತ್ತಿದ್ದಾರೆ. 500 ಕೆ.ಜಿ ತೂಕವಿದ್ದ ಎಮನ್ ಮುಂಬೈಗೆ ಬಂದ ಬಳಿಕ 242 ಕೆ.ಜಿ ತೂಕ ಕಳೆದುಕೊಂಡಿದ್ದಾರೆ.  ಬ್ಯಾರಿಯಾಟ್ರಿಕ್ ಸರ್ಜನ್ ಡಾ. ಮುಜಾಫರ್ ಲಕ್ಡವಾಲಾ ಶಸ್ತ್ರಚಿಕಿತ್ಸೆ ನಡೆಸಿ ಎಮನ್ ತೂಕ ಇಳಿಸಿದ್ದಾರೆ.
 

ದಢೂತಿ ದೇಹದಿಂದಾಗಿ ಕಳೆದ 20 ವರ್ಷಗಳಿಂದ ಎಮನ್ ಮನೆ ಬಿಟ್ಟು ಹೊರಬಂದಿರಲಿಲ್ಲ. ಫೆಬ್ರವರಿ 11ರಂದು ವಿಶೇಷ ವಿಮಾನದ ಮೂಲಕ ಮುಂಬೈಗೆ ಕರೆತರಲಾಗಿತ್ತು. ಕೆಲವೇ ದಿನಗಳಲ್ಲಿ ಮಾರ್ಷ್ 6ರಹೊತ್ತಿಗೆ ದ್ರವ್ಯಾಹಾರ ಮತ್ತು ಪಿಸಿಯೋಥೆರಫಿಯಲ್ಲೇ ಎಮನ್ 100 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ.

ಬಳಿಕ ಊಟದ ಸೇವನೆ ಕಡಿತಗೊಳಿಸಲು ಶೇ.75ರಷ್ಟು ಆಕೆಯ ಹೊಟ್ಟೆಯ ಭಾಗ ಕತ್ತರಿಸಲು ಲ್ಯಾಪರೋಸ್ಕೋಪಿಕ್ ಸರ್ಜರಿ ನಡೆಸಲಾಗಿತ್ತು. ಬಳಿಕ ಮಾರ್ಚ್ 29ರ ಹೊತ್ತಿಗೆ ಆಕೆಯ ತೂಕ 340 ಕೆ.ಜಿಜೆ ಇಳಿದಿತ್ತು. ಇದಾದ 13 ದಿನಗಳಲ್ಲಿ ಮತ್ತೆ 98 ಕೆ.ಜಿ ತೂಕ ಕಳೆದುಕೋಂಡಿದ್ದಾರೆ. ಸದ್ಯ, ಇನ್ನೂ 250 ತೂಕವಿರುವ ಎಮನ್ ದೇಹಭಾರವನ್ನ ಒಂದೂವರೆ ವರ್ಷದಲ್ಲಿ 150 ಕೆ.ಜಿಗೆ ಇಳಿಸುವುದು ವೈದ್ಯುರ ಚಿಂತನೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನಿ ಅಧಿಕಾರಿಗಳ ಜೀವ ರಕ್ಷಸಿದ ಭಾರತೀಯ ಮೀನುಗಾರರು