ಬೆಂಗಳೂರು: ಗಂಡು  ಕಲೆ ಯಕ್ಷಗಾನದ ರಾಜಕುಮಾರ ಎಂದೇ ಪ್ರಸಿದ್ಧರಾಗಿದ್ದ ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ ವಿಧಿವಶರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
									
										
								
																	
ನ್ಯುಮೋನಿಯಾ ಮತ್ತು ಲಘು ಪಾರ್ಶ್ವವಾಯುವಿಗೆ ತುತ್ತಾಗಿದ್ದ ಚಿಟ್ಟಾಣಿ ಹೆಗಡೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಅವರು ಪತ್ನಿ, ಪುತ್ರಿ ಹಾಗೂ ಮೂವರು ಪುತ್ರರು ಅಲ್ಲದೆ, ಅಪಾರ ಅಭಿಮಾನಿ ಬಳಗದವರನ್ನು ಅಗಲಿದ್ದಾರೆ.
									
			
			 
 			
 
 			
			                     
							
							
			        							
								
																	ಬಡಗುತಿಟ್ಟು ಯಕ್ಷಗಾನ ಶೈಲಿಯಲ್ಲಿ ಅವರು ಪಾತ್ರ ನಿರ್ವಹಿಸುತ್ತಿದ್ದರು. ಹೆಚ್ಚಾಗಿ ಖಳ ಪಾತ್ರಗಳು, ವಿಜೃಂಭಣೆಗೆ ಹೆಚ್ಚಿನ ಮಹತ್ವವಿರುವ ಪ್ರಮುಖ ಪಾತ್ರಗಳನ್ನೇ ಅವರು ನಿರ್ವಹಿಸುತ್ತಿದ್ದರು. ಅವರ ನಾಟ್ಯ, ಹಾವಭಾವಗಳು ಯಕ್ಷ ಪ್ರಿಯರಿಗೆ ಬಹು ಪ್ರಿಯವಾಗಿದ್ದವು. ತಮ್ಮ ಜೀವನದ ಕೊನೆಯ ಕ್ಷಣದವರೆಗೂ ಅಂದರೆ ಇತ್ತೀಚೆಗೆ ಕೂಡಾ ಬಣ್ಣ ಹಚ್ಚಿದ ಮಹಾನ್ ಕಲಾವಿದ ಅವರು.
									
										
								
																	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ