Publish Date: Wed, 20 Sep 2017 (10:23 IST)
Updated Date: Wed, 20 Sep 2017 (10:25 IST)
ನವದೆಹಲಿ: ಹಾಟ್ ತಾರೆ ಸನ್ನಿ ಲಿಯೋನ್ ಕಾಂಡೋಮ್ ಜಾಹೀರಾತಿನಿಂದಾಗಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಂಡೋಮ್ ಜಾಹೀರಾತೊಂದರಲ್ಲಿ ಉಲ್ಲೇಖವಾಗುವ ಶಬ್ಧವೊಂದು ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಿದೆ.
ಸನ್ನಿ ಲಿಯೋನ್ ಕಾಣಿಸಿಕೊಳ್ಳುವ ಕಾಂಡೋಮ್ ಜಾಹೀರಾತೊಂದರಲ್ಲಿ ‘ನವರಾತ್ರಿ’ ಎಂಬ ಶಬ್ಧ ಉಲ್ಲೇಖಿಸಲಾಗಿದೆ. ಈ ಜಾಹೀರಾತು ಗುಜರಾತ್ ನ ಸೂರತ್ ನಲ್ಲಿ ಕಟೌಟ್ ರೂಪದಲ್ಲಿ ಹರಿದಾಡುತ್ತಿದೆ. ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತದ್ದು. ಹಾಗಾಗಿ ತಕ್ಷಣವೇ ಜಾಹೀರಾತನ್ನು ಕಿತ್ತು ಹಾಕಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಹಿಂದೊಮ್ಮೆ ಇದೇ ರೀತಿ ಗೋವಾದ ಬಸ್ ಗಳಲ್ಲಿ ಸನ್ನಿ ಲಿಯೋನ್ ರ ಕಾಂಡೋಮ್ ಜಾಹೀರಾತಿನಿಂದ ಮುಜುಗರವಾಗುತ್ತಿದೆ ಎಂದು ಅಲ್ಲಿನ ಸ್ಥಳೀಯರು ಆಪಾದಿಸಿದ್ದರು. ಇದೀಗ ಸೂರತ್ ನ ಸರದಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ