Select Your Language

Notifications

webdunia
webdunia
webdunia
webdunia

ಸನ್ನಿ ಲಿಯೋನ್ ನೋಡಲು ಸಾಗರದಂತೆ ಮುಗಿಬಿದ್ದ ಅಭಿಮಾನಿಗಳು

ಸನ್ನಿ ಲಿಯೋನ್ ನೋಡಲು ಸಾಗರದಂತೆ ಮುಗಿಬಿದ್ದ ಅಭಿಮಾನಿಗಳು
ಕೊಚ್ಚಿ , ಶುಕ್ರವಾರ, 18 ಆಗಸ್ಟ್ 2017 (11:31 IST)
ನೀಲಿ ಚಿತ್ರಗಳ ಬೆಡಗಿ ಸನ್ನಿ ಲಿಯೋನ್`ಗೆ ಅಭಿಮಾನಿಗಳು ಯಾವ ಮಟ್ಟದಲ್ಲಿದ್ದಾರೆಂದರೆ ಅದು ಯಾವುದೇ ಸೂಪರ್ ಸ್ಟಾರ್`ಗೂ ಕಡಿಮೆ ಇಲ್ಲ. ಅದಕ್ಕೆ ಸಾಕ್ಷಿ ಕೊಚ್ಚಿಯ ಈ ಫೋಟೋ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಕೊಚ್ಚಿಗೆ ಆಗಮಿಸಿದ್ದ ಸನ್ನಿ ಲಿಯೋನ್`ಗೆ ಅಭಿಮಾನಿಗಳು ಸಾಗರದಂತೆ ಮುಗಿಬಿದ್ದಿದ್ದರು. ಸಾಗರದಂತೆ ಅಭಿಮಾನಿಗಳ ಮಧ್ಯೆ ಸನ್ನಿಲಿಯೋನ್ ಕಳೆದುಹೋಗಿದ್ದರು. ಅದೆಲ್ಲೋ ಮಧ್ಯದಲ್ಲಿ ಅವರ ಕಾರು ಮಾತ್ರ ಕಾಣಿಸುತ್ತಿತ್ತು. ನಿರ್ಮಾಣ ಹಂತದ ಕೊಚ್ಚಿಯ ಮೆಟ್ರೋ ಕೆಳಭಾಗದಲ್ಲಿ ನಿಂತಿರುವ ಸನ್ನಿ ಕಾರಿನ ಸುತ್ತ ಇರುವೆ ಹಿಂಡಿನಂತೆ ಅಭಿಮಾನಿಗಳ ಸಾಗರ ನೆರೆದಿದೆ.



`ನನ್ನ ಕಾರು ಕೇರಳದ ಕೊಚ್ಚಿಯ ಅಭಿಮಾನಿಗಳ ಸಾಗರದಲ್ಲಿ ಅಕ್ಷರಶಃ ಮುಳುಗಿ ಹೋಗಿತ್ತು’ ಎಂದು ಟ್ವಿಟ್ಟರ್`ನಲ್ಲಿ ಹೇಳಿಕೊಂಡಿರುವ ಸನ್ನಿ ಲಿಯೋನ್ ಫೋಟೋ ಪೋಸ್ಟ್ ಮಾಡಿದ್ದಾರೆ. ಜನಸಾಗರವನ್ನ ಕಂಟ್ರೋಲ್ ಮಾಡಲು ಪೊಲೀಸರು ಪರದಾಡಬೇಕಾಯ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಂಗಭೂಮಿ, ಚಿತ್ರ ನಟ ಏಣಗಿ ಬಾಳಪ್ಪ ನಿಧನ