Publish Date: Fri, 15 Sep 2017 (14:43 IST)
Updated Date: Fri, 15 Sep 2017 (14:49 IST)
ಟೀಮ್ ಇಂಡಿಯಾದ ಯಶಸ್ವಿ ಕ್ಯಾಪ್ಟನ್ ಆಟದಲ್ಲಷ್ಟೇ ಕಿಂಗ್ ಅಲ್ಲ, ಮಾನವೀಯ ಮೌಲ್ಯಗಳಲ್ಲೂ ಕಿಂಗ್ ಎಂಬುವುದನ್ನ ಸಾಬೀತು ಮಾಡಿದ್ದಾರೆ.
ಫಿಟ್ನೆಸ್ ವಿಚಾರದಲ್ಲಿ ಇಡೀ ಟೀಮ್ ಇಂಡಿಯಾ ಆಟಗಾರರಿಗೆ ರೋಲ್ ಮಾಡೆಲ್ ಆಗಿರುವ ವಿರಾಟ್ ಕೊಹ್ಲಿ, ಜಿಮ್`ನಲ್ಲಿ ಬೆವರು ಹರಿಸುತ್ತಾರೆ. ಆರೋಗ್ಯಯುತ ಜೀವನಶೈಲಿ, ಆರೋಗ್ಯಯುತ ಆಹಾರ ಪದ್ಧತಿ ಮೂಲಕ ಗಮನ ಸೆಳೆದಿದ್ದಾರೆ. ಅದೇ ರೀತಿ ಯೂತ್ ಐಕಾನ್ ಆಗಿರುವ ವಿರಾಟ್ ಕೊಹ್ಲಿ, ತಮ್ಮನ್ನ ಫಾಲೋ ಮಾಡುವ ಯುವಕರಿಗೂ ಅದೇ ಸಂದೇಶ ಕೊಟ್ಟಿದ್ದಾರೆ.
ಇದೀಗ, ಕೊಹ್ಲಿ ನಾನು ಏನನ್ನ ಹೇಳುತ್ತೇನೆ, ಅದನ್ನೇ ಮಾಡುತ್ತೇನೆ ಎಂಬ ಸಂದೇಶ ರವಾಸಿಸಿದ್ದಾರೆ. ಪ್ರತಿಷ್ಠಿತ ತಂಪು ಪಾನೀಯವೊಂದರ ಕೋಟಿ ಕೋಟಿ ರೂಪಾಯಿ ಜಾಹೀರಾತನ್ನ ನಿರಾಕರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಸಿರುವ ಕೊಹ್ಲಿ, ನಾನು ಅದನ್ನ ಕುಡಿಯೋದಿಲ್ಲ. ಅದನ್ನ ಕುಡಿಯಿರಿ ಎಂದು ಇತರರಿಗೆ ಹೇಗೆ ಹೇಳಲಿ..? ಹಣ ಬರುತ್ತೆ ಎಂಬ ಕಾರಣಕ್ಕೆ ನಾನು ಜಾಹೀರಾತು ಮಾಡಲಾರೆ ಎಂದಿದ್ದಾರೆ.
ಈ ಹಿಂದೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದ ವಿರಾಟ್ ಕೊಹ್ಲಿ, ಇದನ್ನೇ ಮಾಡಿ ಎಂದು ತಂಡದ ಸದಸ್ಯರ ಮೇಲೆ ನಾನು ಒತ್ತಡ ಹೇರುವುದಿಲ್ಲ. ನಾನು ಮೊದಲು ಅದನ್ನ ಮಾಡಿ ಸಾಧ್ಯವಾದರೆ ಮಾತ್ರ ತಂಡದ ಸದಸ್ಯರಿಗೆ ಮಾಡುವಂತೆ ಹೇಳುತ್ತೇನೆ ಎಂದಿದ್ದರು. ಅಭಿಮಾನಿಗಳ ವಿಷಯದಲ್ಲೂ ಕೊಹ್ಲಿ ಆ ತತ್ವ ಪಾಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ