Select Your Language

Notifications

webdunia
webdunia
webdunia
webdunia

ಕನ್ನಡ ಚಿತ್ರದಲ್ಲಿ ನಾಯಕಿಯಾಗಿ ಸನ್ನಿ..!

ಕನ್ನಡ ಚಿತ್ರದಲ್ಲಿ ನಾಯಕಿಯಾಗಿ ಸನ್ನಿ..!
ಬೆಂಗಳೂರು , ಸೋಮವಾರ, 4 ಸೆಪ್ಟಂಬರ್ 2017 (19:17 IST)
ಪೋರ್ನ್ ಉದ್ಯಮದಿಂದ ಹೊರಬಂದ ಸನ್ನಿ ಲಿಯೋನ್ ಭಾರತೀಯ ಚಿತ್ರೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇತ್ತೀಚೆಗೆ ಕೊಚ್ಚಿಯಲ್ಲಿ ಸನ್ನಿಯನ್ನ ಮುತ್ತಿಕೊಂಡಿದ್ದ ಅಭಿಮಾನಿಗಳನ್ನ ನೋಡಿದರೆ ಅವರ ಜನಪ್ರಿಯತೆ ಎಷ್ಟಮಟ್ಟಿಗೆ ಇದೆ ಎಂದು ಅರ್ಥವಾಗುತ್ತದೆ. ಸದ್ಯದ ವಿಷಯವೇನೆಂದರೆ, ಆಗಾಗ್ಗೆ ಕನ್ನಡದಲ್ಲಿ ಒಂದೊಂದು ಐಟಂ ಡ್ಯಾನ್ಸ್ ಮಾಡಿ ಹೋಗುತ್ತಿದ್ದ ಸನ್ನಿ ಲಿಯೋನ್ ಪೃ್ಣ ಪ್ರಮಾಣದ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆಂಬ ಸುದ್ದಿ ಬಂದಿದೆ.

ಹೌದು, ಡಿಕೆ ಚಿತ್ರದಲ್ಲಿ ಸೇಸಮ್ಮಳಾಗಿ, ಲವ್ ಯು ಅಲಿಯಾದಲ್ಲಿ ಕಾಮಾಕ್ಷಿಯಾಗಿ ಐಟಂ ಡ್ಯಾನ್ಸ್ ಮಾಡಿ ಪಡ್ಡೆಗಳಿಗೆ ಹುಚ್ಚು ಹಿಡಿಸಿದ್ದ ಸನ್ನಿ ಲಿಯೋನ್, ನಿನ್ನದೇ ಹೆಜ್ಜೆ ಡಾಟ್ ಕಾಮ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಹಾಗಾದರೆ, ಹೀರೋ ಯಾರು ಎಂಬ ಪ್ರಶ್ನೆಗೆ ಗಾಂಧಿನಗರದಿಂದ ಇನ್ನೂ ಉತ್ತರ ಬಂದಿಲ್ಲ.

ಮೋಹನ್ ಹಾಸನ್ ಎಂಬುವವರು ಚಿತ್ರ ನಿರ್ಮಿಸುತ್ತಿದ್ದಾರೆಂದು ವರದಿಯಾಗಿದೆ. ಸಾಫ್ಟ ವೇರ್ ಕಂಪನಿಯೊಂದರ ಚಿತ್ರಕಥೆಯನ್ನ ಚಿತ್ರ ಓಳಗೊಂಡಿದೆ ಎನ್ನಲಾಗಿದ್ದು, ಸನ್ನಿ ಮೋಡಿ ಹೇಗಿರುತ್ತೆ ಎಂಬುದನ್ನ ಕಾದು ನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾತ್ ಟಬ್`ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ ಸೆಲಿನಾ ಜೇಟ್ಲಿ..!