Publish Date: Tue, 26 Sep 2017 (07:20 IST)
Updated Date: Tue, 26 Sep 2017 (07:25 IST)
ನವದೆಹಲಿ: ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಸಿನಿಮಾ ಬೇರೆಯದೇ ಹವಾ ಸೃಷ್ಟಿಸಿತ್ತು. ಇದು ಭಾರತದ ಚಿತ್ರರಂಗದ ಇತಿಹಾಸದಲ್ಲೇ ಮೈಲುಗಲ್ಲಾಗಿತ್ತು. ಹಾಗಿದ್ದರೂ ಆಸ್ಕರ್ ಗೆ ಎಂಟ್ರಿ ಪಡೆಯಲು ವಿಫಲವಾಗಿದೆ.
ಬಾಹುಬಲಿ 2 ಆಸ್ಕರ್ ಗೆ ಪ್ರವೇಶ ಪಡೆಯುತ್ತದೆ ಎಂದೇ ಅಭಿಮಾನಿಗಳು ನಂಬಿದ್ದರು. ಆದರೆ ಬಾಹುಬಲಿಯನ್ನು ಮೀರಿಸಿ ಅಮಿತ್ ಮಸುರ್ಕರ್ ನಿರ್ದೇಶನದ ‘ನ್ಯೂಟನ್’ ಚಿತ್ರ ಭಾರತದಿಂದ ಪ್ರತಿಷ್ಠಿತಿ ಆಸ್ಕರ್ ಪ್ರಶಸ್ತಿಗೆ ಪ್ರವೇಶ ಪಡೆದಿದೆ.
ಇದರಿಂದ ನಿರಾಸೆಯಾಗಿದೆಯೇ ಎಂದು ನಿರ್ದೇಶಕ ರಾಜಮೌಳಿಯನ್ನು ಕೇಳಿದಾಗ ‘ಖಂಡಿತಾ ಇಲ್ಲ. ನಾನು ಪ್ರಶಸ್ತಿ ಆಸೆಗಾಗಿ ಸಿನಿಮಾ ಮಾಡಿಲ್ಲ. ನನಗೆ ಹಾಗೂ ನನ್ನ ಸಿನಿಮಾದಲ್ಲಿ ತೊಡಗಿಸಿಕೊಂಡ ಎಲ್ಲರಿಗೂ ತಾವು ಹಾಕಿದ ಬಂಡವಾಳ ವಾಪಸಾಗಬೇಕು ಮತ್ತು ಮಾಡಿದ ಕೆಲಸ ತೃಪ್ತಿ ಕೊಡಬೇಕು. ಅಷ್ಟೇ ನನಗೆ ತೃಪ್ತಿ ಕೊಡುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ಅಭಿಮಾನಿಗಳಿಗೆ ಮಾತ್ರ ತುಂಬಾ ಬೇಜಾರಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ