Select Your Language

Notifications

webdunia
webdunia
webdunia
webdunia

ಚೈನಾದಲ್ಲೂ ದಂಗಲ್ ಜತೆ ಬಾಹುಬಲಿ ಫೈಟ್!

ಚೈನಾದಲ್ಲೂ ದಂಗಲ್ ಜತೆ ಬಾಹುಬಲಿ ಫೈಟ್!
Mumbai , ಮಂಗಳವಾರ, 23 ಮೇ 2017 (10:46 IST)
ಮುಂಬೈ: ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಭಾರತದಲ್ಲಿ ಸದ್ದು ಮಾಡುತ್ತಿದ್ದರೆ, ಇನ್ನೊಂದೆಡೆ ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ಚೈನಾದಲ್ಲಿ ಸದ್ದು ಮಾಡುತ್ತಿತ್ತು.

 
ಇದೀಗ ಬಾಲಿವುಡ್ ಬುಡ ಅಲ್ಲಾಡಿಸಿದ್ದ ಬಾಹುಬಲಿ ತೆಲುಗು ಚಿತ್ರ  ಚೈನಾದಲ್ಲೂ ಅಮೀರ್ ರ ದಂಗಲ್ ಗೆ ಪೈಪೋಟಿ ನೀಡಲಿದೆ. ಅಲ್ಲಿ ದಂಗಲ್ ಭಾರೀ ಯಶಸ್ವಿಯಾಗಿ, ಅಮೀರ್ ಚಿತ್ರ ಹಣ ಕೊಳ್ಳೆ ಹೊಡೆದಿತ್ತು.

ಇದೀಗ ಭಾರತದಲ್ಲಿ ಸಾವಿರಾರು ಕೋಟಿ ಬಾಚಿ ದಾಖಲೆ ಮಾಡಿದ ಬಾಹುಬಲಿ ವಿದೇಶದಲ್ಲೂ ಬಾಲಿವುಡ್ ಮಂದಿಯ ಗರ್ವ ಭಂಗ ಮಾಡುತ್ತದಾ ಎಂದು ಕಾದು ನೋಡಬೇಕಿದೆ. ದಂಗಲ್ ಚೈನಾದಲ್ಲಿ 600 ಕೋಟಿ ಗಳಿಕೆ ಮಾಡಿತ್ತು.

ಇದೀಗ ರಾಜಮೌಳಿ ತಮ್ಮ ಚಿತ್ರವನ್ನೂ ಚೈನಾದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಆ ಮೂಲಕ ದಂಗಲ್ ದಾಖಲೆ ಮುರಿಯಲು ಸಜ್ಜಾಗಿದ್ದಾರೆ. ಸದ್ಯಕ್ಕೆ ಇವೆರಡು ಚಿತ್ರಗಳು ಗಳಿಕೆಯಲ್ಲಿ ದಾಖಲೆ ಮಾಡುತ್ತಿದ್ದು, ಭಾರೀ ಪೈಪೋಟಿಯಲ್ಲಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಓಲೈಸಲು ಮುಂದಾದ ಅಭಿಮಾನಿಗೆ ಗರಂ ಆಗಿ ಸಂದೇಶ ಕಳುಹಿಸಿದ ಕಿಚ್ಚ ಸುದೀಪ್