Publish Date: Tue, 23 May 2017 (09:11 IST)
Updated Date: Tue, 23 May 2017 (09:13 IST)
ಬೆಂಗಳೂರು: ಕಿಚ್ಚ ಸುದೀಪ್ ಯಾವತ್ತೂ ತಾವು ತಮ್ಮನ್ನು ಓಲೈಸುವವರ ಬಲೆಗೆ ಬೀಳುವ ವ್ಯಕ್ತಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅದಕ್ಕೆ ಕಾರಣ ಈ ಟ್ವೀಟ್.
ಸುದೀಪ್ ರನ್ನು ಖುಷಿಪಡಿಸಲು ಅಭಿಮಾನಿಯೊಬ್ಬ ಟ್ವಿಟರ್ ನಲ್ಲಿ ಅವರನ್ನು ಬೇರೆ ನಟರಿಗಿಂತ ಸುದೀಪ್ ಹೇಗೆ ಭಿನ್ನ ಎಂದು ಮೆಸೇಜ್ ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್, ಇನ್ನೊಬ್ಬ ನಟನ ಜತೆಗೆ ಹೋಲಿಸಿ ನನ್ನನ್ನು ಹೊಗಳಬೇಡಿ. ನನ್ನ ಸಹ ನಟರ ಬಗ್ಗೆ ಅವಹೇಳನಕಾರಿಯಾಗಿ ಅಥವಾ ಘನತೆಗೆ ಕುತ್ತು ತರುವಂತಹ ಹೇಳಿಕೆಗಳನ್ನು ನಾನು ಇಷ್ಟಪಡುವುದಿಲ್ಲ ಎಂದು ಅವರು ಗರಂ ಆಗಿ ಹೇಳಿದ್ದಾರೆ.
ಅಷ್ಟಕ್ಕೂ ಆ ಅಭಿಮಾನಿ ಹೇಳಿದ್ದೇನು? ಸುದೀಪ್ ರ ಮೂರು ವಿಭಿನ್ನ ಗೆಟಪ್ ಗಳ ಫೋಟೋ ಹಾಕಿದ ಅಭಿಮಾನಿ, ಎಲ್ಲಾ ನಟರೂ ಮಾಸ್ ರೋಲ್ ಮಾಡುತ್ತಾರೆ. ಆದರೆ ಸುದೀಪ್ ರೀತಿ ಭಾವಾಭಿನಯ ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದು ಸಂದೇಶ ಬರೆದಿದ್ದರು. ಇದು ಕಿಚ್ಚನನ್ನು ಕೆರಳಿಸಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ