Select Your Language

Notifications

webdunia
webdunia
webdunia
webdunia

ಚಿತ್ರರಂಗಕ್ಕೆ ರಮ್ಯಾ ಹೇಳ್ತಾರಂತೆ ಗುಡ್ ಬೈ!

ಚಿತ್ರರಂಗಕ್ಕೆ ರಮ್ಯಾ ಹೇಳ್ತಾರಂತೆ ಗುಡ್ ಬೈ!
ಬೆಂಗಳೂರು , ಮಂಗಳವಾರ, 26 ಸೆಪ್ಟಂಬರ್ 2017 (07:01 IST)
ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ಎನಿಸಿಕೊಂಡಿದ್ದ ರಮ್ಯಾ ತಮ್ಮ ಅಭಿಮಾನಿಗಳಿಗೆ ಬೇಸರವಾಗುವಂತಹ ಸಂಗತಿಯೊಂದನ್ನು ಖಾಸಗಿ ವಾಹಿನಿಯೊಂದಕ್ಕೆ ಹೇಳಿದ್ದಾರೆ.

 
ನಾನಿನ್ನು ನಟಿಸಲ್ಲ ಎಂದು ಕಡ್ಡಿ ತುಂಡು ಮಾಡಿದ ಹಾಗೆ ರಮ್ಯಾ ಸ್ಪಷ್ಟವಾಗಿ ಹೇಳಿದ್ದಾರೆ. ನನಗಿಂತ ಒಳ್ಳೆಯ ಟ್ಯಾಲೆಂಟ್ ಗಳು ಕನ್ನಡದಲ್ಲಿದ್ದಾರೆ. ಅವರಿಗೆ ಅವಕಾಶ ಕೊಡಿ. ನನಗೆ ಇನ್ನು ಚಿತ್ರರಂಗದ ಸಹವಾಸ ಸಾಕು ಎಂದಿದ್ದಾರೆ.

ಹಾಗಿದ್ರೆ ನಿಮ್ಮನ್ನು ಇಷ್ಟಪಡುವ ಅಭಿಮಾನಿಗಳಿಗೆ ಬೇಜಾರಾಗಲ್ವೇ? ಎಂದು ಕೇಳಿದ್ದಕ್ಕೆ ಇಲ್ಲ ಸಾಕು. ಇನ್ನೇನು ಮಾತಾಡಲ್ಲ ಎಂದು ಬೈ ಬೈ ಮಾಡಿ ಹೊರಟೇ ಹೋಗಿದ್ದಾರೆ. ಹಾಗಾಗಿ ರಮ್ಯಾರನ್ನು ತೆರೆ ಮೇಲೆ ಮತ್ತೆ  ನೋಡಬಹುದು ಎಂಬ ಆಸೆ ಕೈ ಬಿಡೋದೇ ಒಳ್ಳೇದು. ಇತ್ತೀಚೆಗೆ ಗಣೇಶ್ ಜತೆ ರಮ್ಯಾ ಮಹೇಂದ್ರನ ಮನಸ್ಸಲ್ಲಿ ಮುಮ್ತಾಜ್ ಎಂಬ ಸಿನಿಮಾ ಮಾಡ್ತಾರೆ ಎಂದು ಸುದ್ದಿಯಾಗಿತ್ತು. ಅದೆಲ್ಲಾ ಸುಳ್ಳು ಎಂದು ರಮ್ಯಾ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೊಲಂಬೊ ಪ್ರವಾಸದಲ್ಲಿ ಗಣೇಶ್ ಫ್ಯಾಮಿಲಿ