Select Your Language

Notifications

webdunia
webdunia
webdunia
webdunia

ಕೊಲಂಬೊ ಪ್ರವಾಸದಲ್ಲಿ ಗಣೇಶ್ ಫ್ಯಾಮಿಲಿ

ಕೊಲಂಬೊ ಪ್ರವಾಸದಲ್ಲಿ ಗಣೇಶ್ ಫ್ಯಾಮಿಲಿ
ಬೆಂಗಳೂರು , ಸೋಮವಾರ, 25 ಸೆಪ್ಟಂಬರ್ 2017 (23:11 IST)
ಬೆಂಗಳೂರು: ಸತತ ಸಿನಿಮಾಗಳಿಂದ ಬ್ಯುಸಿಯಾಗಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಈಗ ಜಾಲಿ ಮೂಡಲ್ಲಿದ್ದಾರೆ. ತಮ್ಮ ಪತ್ನಿ ಶಿಲ್ಪಾ ಗಣೇಶ್ ಮತ್ತು ಮಕ್ಕಳ ಜತೆ ಶ್ರೀಲಂಕಾದಲ್ಲಿ ಹಾಲಿಡೇ ಎಂಜಾಯ್ ಮಾಡ್ತಿದ್ದಾರೆ.

ಸದ್ಯ ಗಣೇಶ್ ಅಭಿನಯದ ಮುಗುಳುನಗೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇನ್ನು ಚಮಕ್ ಮತ್ತು ಆರೆಂಜ್ ಚಿತ್ರ ಶೂಟಿಂಗ್ ಹಂತದಲ್ಲಿದೆ. ಇದೇ ಖುಷಿಯಲ್ಲಿ ಕೊಲಂಬೊ ಸುತ್ತುತ್ತಿದ್ದಾರೆ ಗಣಿ ಅಂಡ್ ಫ್ಯಾಮಿಲಿ.
webdunia

ಸದ್ಯ ಕೊಲಂಬೊದಲ್ಲಿರುವ ಗಣೇಶ್ ಮತ್ತು ಪುತ್ರ ಹೆಬ್ಬಾವಿನೊಂದಿಗೆ ಚಿನ್ನಾಟವಾಡುತ್ತಿರುವ ವೀಡಿಯೋ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ವಿಹಾನ್ ಸ್ವಲ್ಪವೂ ಭಯವಿಲ್ಲದೆ ಹಾವಿನ ಜತೆ ಆಟವಾಡ್ತಿದ್ದಾನೆ. ಈ ದೃಶ್ಯವನ್ನ ಗಣೇಶ್ ತಮ್ಮ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
webdunia

ಮತ್ತೊಂದು ಕಡೆ ರಿಲ್ಯಾಕ್ಸ್ ಮೂಡ್ ನಲ್ಲಿರುವ ಗಣೇಶ್, ರೆಸಾರ್ಟ್ ವೊಂದರಲ್ಲಿ ಬಣ್ಣ ಬಣ್ಣದ ಮೀನುಗಳಿಗೆ ಮಗನ ಜತೆ ಆಹಾರ ನೀಡ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿತ್ರರಂಗಕ್ಕೆ ಚಿರಂಜೀವಿ ಕುಟುಂಬದ ಮತ್ತೊಬ್ಬ ನಟ ಎಂಟ್ರಿ