Publish Date: Fri, 16 Jun 2017 (11:49 IST)
Updated Date: Fri, 16 Jun 2017 (11:53 IST)
ಹೈದರಾಬಾದ್: ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಸಿನಿಮಾ ಯಶಸ್ವಿಯಾಗಿ 50 ದಿನ ಪೂರೈಸಿದೆ. ಅರ್ಧಶತಕ ಗಳಿಸಿ ಇನ್ನೂ ದಾಖಲೆ ಮಾಡುತ್ತಾ ಮುನ್ನುಗ್ಗುತ್ತಿರುವ ಬಾಹುಬಲಿ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ.
ಈಗಾಗಲೇ 1600 ಕೋಟಿ ರೂ. ಗಳಿಕೆ ಮಾಡಿ ಮುನ್ನುಗ್ಗುತ್ತಿರುವ ಬಾಹುಬಲಿ ಇನ್ನೂ ಅದೆಷ್ಟು ದಾಖಲೆಗಳನ್ನು ಪುಡಿಗಟ್ಟುತ್ತೋ ಗೊತ್ತಿಲ್ಲ. ಎಲ್ಲಾ ಭಾಷೆಗಳಲ್ಲೂ ಸೂಪರ್ ಹಿಟ್ ಆಗಿರುವ ಚಿತ್ರ ವಿದೇಶಗಳಲ್ಲೂ ಮೋಡಿ ಮಾಡಿದೆ.
ಏಪ್ರಿಲ್ 28 ಕ್ಕೆ ತೆಲುಗು, ಮಲಯಾಳಂ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಅಂತೂ 100 ದಿನ ಪೂರೈಸುವುದರೊಳಗೆ ಇನ್ನಷ್ಟು ಕೋಟಿ ನಿರ್ಮಾಪಕರ ಜೇಬು ತುಂಬುವುದಂತೂ ಸತ್ಯ.